ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ: ಮೋದಿ ಸರ್ಕಾರಕ್ಕೆ ಮತ್ತಷ್ಟು ಬಲ

ನವದೆಹಲಿ, ಜನವರಿ 30: ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(Global Corruption Perceptions Index) ಹೊರಬಿದ್ದಿದ್ದು, ಭಾರತ ಮೂರು ಸ್ಥಾನ ಸುಧಾರಣೆ ಹೊಂದಿ 78 ನೇ ಸ್ಥಾನದಲ್ಲಿದೆ. 2017 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ 81 ನೇ ಸ್ಥಾನದಲ್ಲಿತ್ತು.

ಅತ್ಯಂತ ಕಡಿಮೆ ಭ್ರಷ್ಟಾಚಾರವಿರುವ ದೇಶಗಳನ್ನು ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನ ಗಳಿಸಿದ್ದರೆ, ನ್ಯೂಜಿಲೆಂಡ್ ಎರಡನೇ ಸ್ಥಾನ ಮತ್ತು ಸಿಂಗಪುರ ಮೂರನೇ ಸ್ಥಾನ ಗಳಿಸಿವೆ.

India improves on global corruption index in 2018, ranks 78

ಸಾರ್ವಜನಿಕ ವಲಯದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಒಟ್ಟು 13 ಪರಿಣಿತ ಸಮೀಕ್ಷೆಗಳು ನಡೆದಿದ್ದು, ಅವು ತಮ್ಮ ಫಲಿತಾಂಶವನ್ನು ಹೊರಹಾಕಿವೆ.

ಈ ಪಟ್ಟಿಯಲ್ಲಿ ಚೀನಾ ಭಾರತಕ್ಕಿಂತ ಕೆಳ ಸ್ಥಾನಕ್ಕೆ ಕುಸಿದಿದ್ದು, 87 ನೇ ಸ್ಥಾನದಲ್ಲಿದೆ. ಪಾಕಿಸ್ತಾನ 117 ನೇ ಸ್ಥಾನ ಕಾಯ್ದುಕೊಂಡಿದೆ.

ನರೇಂದ್ರ ಮೋದಿ ಸರ್ಕಾರದ ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಗಳು ಭ್ರಷ್ಟಾಚಾರನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ವಿರೋಧಿಗಳು ತಕರಾರು ತೆಗೆಯುತ್ತಿದ್ದ ಸಮಯದಲ್ಲಿ ಈ ವರದಿ ಬಿಡುಗಡೆಯಾಗಿದ್ದು ಮೋದಿ ಸರ್ಕಾರಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಚುನಾವಣೆಯ ಹೊತ್ತಲ್ಲಿ ಎನ್ ಡಿಎ ಸರ್ಕಾರಕ್ಕೆ ಇದು ಪೂರಕವಾದರೆ ಅಚ್ಚರಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+