ಚೀನಾದಿಂದ ಎರಡನೇ ವಿಶೇಷ ವಿಮಾನದಲ್ಲಿ ಬಂದಿಳಿದ 323 ಭಾರತೀಯರು
ನವದೆಹಲಿ, ಫೆಬ್ರವರಿ 2: ಚೀನಾದಿಂದ ಮತ್ತೊಂದು ವಿಶೇಷ ವಿಮಾನ ದೆಹಲಿಗೆ ಬಂದಿದ್ದು 323 ಭಾರತೀಯರು ವಾಪಸಾಗಿದ್ದಾರೆ.
ವುಹಾನ್‌ನಿಂದ 324 ಮಂದಿ ಶನಿವಾರವಷ್ಟೇ ಭಾರತಕ್ಕೆ ಆಗಮಿಸಿದ್ದರು. ಇದೀಗ ಬೋಯಿಂಗ್ 747 ವಿಮಾನದಲ್ಲಿ ಮತ್ತೆ 323 ಮಂದಿ ಚೀನಾದಿಂದ ಆಗಮಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಕೊರೊನಾ ವೈರಸ್‌ನಿಂದ ಚೀನಾದಲ್ಲಿ ಇದುವರೆಗೆ 300 ಮಂದಿ ಮೃತಪಟ್ಟಿದ್ದು, 9 ಸಾವಿರ ಸೋಂಕಿಗೆ ತುತ್ತಾಗಿದ್ದಾರೆ.

ಚೀನಾದ ವುಹಾನ್‌ನಿಂದ ಬೆಳಗಿನ ಜಾವ 3.10ಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಬೆಳಗ್ಗೆ 9.45ಕ್ಕೆ ದೆಹಲಿಗೆ ಬಂದಿಳಿದಿದೆ.
ಮಾಸ್ಕ್, ಗ್ಲೌಸ್, ಔಷಧಿಗಳನ್ನು ವಿಮಾನದ ಪ್ರತಿ ಆಸನದಲ್ಲೂ ಇರಿಸಲಾಗಿದ್ದು, ಇಬ್ಬರು ವಿಶೇಷ ವೈದ್ಯರನ್ನು ಸಹ ಜತೆಯಲ್ಲಿ ಕಳುಹಿಸಿಕೊಡಲಾಗುತ್ತಿದೆ.
ವುಹಾನ್ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದೆ. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ಕೂಡ ಹೇಳಿದ್ದರು.












Click it and Unblock the Notifications