12 ದಿನದಲ್ಲಿ 50 ಲಕ್ಷ ಕೇಸ್ ಪತ್ತೆ, ವಿಶ್ವದ ಹನ್ನೊಂದನೇ ದೇಶ ಭಾರತ
ದೆಹಲಿ, ಮೇ 19: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ನಿನ್ನೆ ಒಂದೇ ದಿನ 4970 ಕೇಸ್‌ಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 101139ಕ್ಕೆ ಏರಿಕೆಯಾಗಿದೆ. ಈ ಮೂಲಕ ಜಗತ್ತಿನಲ್ಲಿ ಒಂದು ಲಕ್ಷ ಕೊರೊನಾ ಕೇಸ್ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ.
Recommended Video
ಜನವರಿಯಲ್ಲಿ ಮೊದಲ ಕೊರೊನಾ ಕೇಸ್ ಕೇರಳದಲ್ಲಿ ಪತ್ತೆಯಾಗಿತ್ತು. ಈ ಮಹಾಮಾರಿ ಭಾರತಕ್ಕೆ ವಕ್ಕರಿಸಿಕೊಂಡು ಸುಮಾರು ನಾಲ್ಕು ತಿಂಗಳು ಆಗುತ್ತಿದೆ. ಕಳೆದ ಹದಿನೈದು ದಿನದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಮುಂದೆ ಓದಿ...

12 ದಿನಕ್ಕೆ 50 ಲಕ್ಷ ಕೇಸ್
ಫೆಬ್ರವರಿ 15ಕ್ಕೆ ಭಾರತದಲ್ಲಿ ಕೇವಲ ಮೂರು ಕೇಸ್ ಮಾತ್ರ ಇತ್ತು. ಅಲ್ಲಿಂದ ಮೇ 6ರವರೆಗೂ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಕೇವಲ 49,391 ಮಾತ್ರ ಆಗಿತ್ತು. ಆದರೆ, ಅಲ್ಲಿಂದ 12 ದಿನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜಿಗಿತ ಕಂಡಿರುವ ಸೋಂಕು ಒಂದು ಲಕ್ಷ (101139) ಗಡಿದಾಟುವಂತೆ ಮಾಡಿದೆ.

ಜಗತ್ತಿನಲ್ಲಿ 11ನೇ ದೇಶ ಭಾರತ
ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 11ನೇ ಸ್ಥಾನ. ಯುಎಸ್‌ನಲ್ಲಿ 1,550,294 ಪ್ರಕರಣ ದಾಖಲಾಗಿದೆ. ರಷ್ಯಾ (290,678), ಸ್ಪೇನ್ (278,188), ಬ್ರೆಜಿಲ್ (255,368), ಯುಕೆ (246,406), ಇಟಲಿ (225,886), ಫ್ರಾನ್ಸ್ (179,927), ಜರ್ಮನಿ (177,289), ಟರ್ಕಿ (150,593), ಇರಾನ್ (122,492) ದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸೋಂಕು ವರದಿಯಾಗಿದೆ.

ಗುಜರಾತ್ ಹಿಂದಿಕ್ಕಿದ ತಮಿಳುನಾಡು
ಏಪ್ರಿಲ್ ಅಂತ್ಯದವರೆಗೂ ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣದಲ್ಲಿತ್ತು. ಆದರೆ, ಮೇ ತಿಂಗಳ ಆರಂಭದಿಂದ ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಅದರಲ್ಲೂ ಮಹಾರಾಷ್ಟ್ರ (33 ಸಾವಿರ), ತಮಿಳುನಾಡು (11224), ಗುಜರಾತ್‌ನಲ್ಲಿ (11,380) ಕೊರೊನಾ ಹಾಟ್‌ಸ್ಪಾಟ್ ರಾಜ್ಯಗಳಾಗಿವೆ. ನಿನ್ನೆಯವರೆಗೂ ಮೂರನೇ ಸ್ಥಾನದಲ್ಲಿದ್ದ ತಮಿಳುನಾಡು, ಇಂದು ಗುಜರಾತ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ.

ಹೊಸ ಕೇಸ್‌ಗಳಲ್ಲೂ ಭಾರತ ವೇಗ
ಪ್ರಸ್ತುತ ಫ್ರಾನ್ಸ್, ಯುಕೆ, ಜರ್ಮನಿ, ಸ್ಪೇನ್, ಇಟಲಿ ಅಂತಹ ರಾಷ್ಟ್ರಗಳಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ, ಭಾರತದಲ್ಲಿ ಈಗ ಏರಿಕೆಯಾಗುತ್ತಿದೆ. ಯುಎಸ್, ರಷ್ಯಾ, ಬ್ರೆಜಿಲ್ ನಂತರ ಭಾರತ ಅತಿ ಹೆಚ್ಚು ಹೊಸ ಕೇಸ್ ವರದಿ ಮಾಡುತ್ತಿದೆ. ಸದ್ಯ ಭಾರತದಲ್ಲಿ ಪ್ರತಿ ದಿನ 4.5 ರಿಂದ 5 ಸಾವಿರವರೆಗೂ ಪ್ರಕರಣಗಳು ದಾಖಲಾಗುತ್ತಿದೆ.












Click it and Unblock the Notifications