"ಕೋವಿಡ್ ಪರೀಕ್ಷೆ; ಇಡೀ ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ"

ನವದೆಹಲಿ, ನವೆಂಬರ್ 10: ಕೋವಿಡ್ ಪರೀಕ್ಷೆಯ ಪ್ರಮಾಣದಲ್ಲಿ ಇಡೀ ವಿಶ್ವದಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದೆ. ಎರಡು ವಾರಗಳ ಹಿಂದಿನ ಅಂಕಿ ಅಂಶಗಳನ್ನು ನೋಡುವುದಾದರೆ, ವಿಶ್ವದ ಯಾವುದೇ ಇತರೆ ದೇಶಗಳಿಗಿಂತ ಅತಿ ಹೆಚ್ಚಿನ ಪರೀಕ್ಷೆ ಭಾರತದಲ್ಲಿ ನಡೆದಿದೆ. ಕೊರೊನಾ ಪರೀಕ್ಷೆ ವಿಷಯದಲ್ಲಿ ಮುಂದೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದಿದ್ದಾರೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್.

ಮಂಗಳವಾರ, ದೇಶದಲ್ಲಿನ ಕೊರೊನಾ ಪರೀಕ್ಷೆಗಳ ಕುರಿತು ಮಾತನಾಡಿದ ಅವರು, "ಇದುವರೆಗೂ ದೇಶದಲ್ಲಿ 11.96 ಕೋಟಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ವಾರದಿಂದೀಚೆಗೆ ಪ್ರತಿದಿನವೂ 11 ಲಕ್ಷ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.

India Covid 19 Tests Are Second Highest In The World Said Union Health Ministry Secretary

ಕೋವಿಡ್ 19 ಲಸಿಕೆಯ ಕುರಿತು ಮಾತನಾಡಿದ ಅವರು, "ಲಸಿಕೆ ಕುರಿತಂತೆ ರಾಷ್ಟ್ರೀಯ ತಜ್ಞರ ತಂಡ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಲಸಿಕೆ ಸಂಶೋಧನೆ, ಉತ್ಪಾದನೆಯಲ್ಲಿ ನಿರತವಾಗಿರುವ ವಿದೇಶ, ದೇಶದ ಎಲ್ಲಾ ಸಂಸ್ಥೆಗಳೊಂದಿಗೆ ಈ ತಂಡ ಮಾತುಕತೆ ನಡೆಸುತ್ತಿದೆ. ಕೊರೊನಾ ಲಸಿಕೆಯ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ಲಸಿಕೆಯ ಅನುಮೋದನೆಗೆ ಸಂಬಂಧಿಸಿದಂತೆಯೂ ಕಾರ್ಯ ನಿರ್ವಹಿಸುತ್ತಿದೆ ಎಂದರು.

India Covid 19 Tests Are Second Highest In The World Said Union Health Ministry Secretary

ಭಾರತದಲ್ಲಿ 2 ರಿಂದ ಮೈನಸ್ 90 ಡಿಗ್ರಿ ಉಷ್ಣತೆಯಲ್ಲಿ ಲಸಿಕೆಗಳನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ಲಭವಿರುವ ವ್ಯವಸ್ಥೆಯ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+