ಮಹಿಳೆ ಕಾಪಾಡಲು ಹೋಗಿ ಪ್ರಾಣತೆತ್ತ ಐಎಸ್ಎಸ್ ಅಧಿಕಾರಿ
ನವದೆಹಲಿಯಲ್ಲಿನ ಫಾರಿನ್ ಸರ್ವೀಸ್ ಟ್ರೈನಿಂಗ್ ಇನ್ಸಿಟಿಟ್ಯೂಟ್ ನಲ್ಲಿ ತರಬೇತಿ ಪಡೆಯುತ್ತಿದ್ದ 80 ಅಧಿಕಾರಿಗಳು ಪಾರ್ಟಿಯೊಂದರಲ್ಲಿ ಭಾಗಿಯಾದಾಗ ನಡೆದ ಆಕಸ್ಮಿಕದಲ್ಲಿ ಅಸುನೀಗಿದ ಯುವ ಐಎಎಸ್ ಅಧಿಕಾರಿ.
ನವದೆಹಲಿ, ಮೇ 30: ಸ್ವಿಮ್ಮಿಂಗ್ ಪೂಲ್ ನಲ್ಲಿದ್ದ ಯುವತಿಯೊಬ್ಬಳನ್ನು ಕಾಪಾಡಲು ನೀರಿಗೆ ಧುಮುಕಿದ್ದ ಆಶಿಶ್ ದಾಹಿಯಾ (31) ಎಂಬ ಐಎಸ್ಎಸ್ ಅಧಿಕಾರಿ ಸ್ವಿಮ್ಮಿಂಗ್ ಪೂಲ್ ನಲ್ಲೇ ಮುಳುಗಿ ಅಸುನೀಗಿರುವ ಘಟನೆ ಇಲ್ಲಿನ ತರಬೇತಿ ಕೇಂದ್ರವೊಂದರಲ್ಲಿ ಸೋಮವಾರ (ಮೇ 29) ರಾತ್ರಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ನಗರದ ಫಾರಿನ್ ಸರ್ವೀಸ್ ಇನ್ಸಿಟಿಟ್ಯೂಟ್ ನಲ್ಲಿ ತರಬೇತಿ ಹಂತದಲ್ಲಿರುವ ಎಲ್ಲಾ 25 ಐಎಸ್ಎಸ್ ಅಧಿಕಾರಿಗಳಿಗೆ ಅವರ ತರಬೇತಿಯು ಕೊನೆಗೊಂಡ ಕಾರಣದಿಂದ ಪಾರ್ಟಿ ಆಯೋಜಿಸಲಾಗಿತ್ತು. ಅದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬಳು, ಅಕಸ್ಮಾತ್ ಆಗಿ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದಳು. ಆಕೆಯನ್ನು ರಕ್ಷಿಸಲು ನೀರಿಗೆ ಹಾರಿದ ಆಶಿಶ್, ಆಕೆಯನ್ನು ಮೇಲೆತ್ತಿ ಕೊಟ್ಟರಾದರೂ ಅವರು ಮೇಲೆ ಬರದೇ ಅಸ್ವಸ್ಥರಾದರು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ರಾತ್ರಿ 1 ಗಂಟೆ ವೇಳೆಗೆ ಅವರು ನಿಧನರಾದರು.












Click it and Unblock the Notifications