ವಾಯು ಗಡಿ ಉಲ್ಲಂಘಿಸಿ ಬಂದ ವಿಮಾನವನ್ನು ಇಳಿಸಿದ ಭಾರತ

ನವದೆಹಲಿ, ಮೇ 10: ಪಾಕಿಸ್ತಾನದ ಕರಾಚಿಯಿಂದ ಹೊರಟಿದ್ದ ಸರಕು ಸಾಗಣೆ ವಿಮಾನವು ಭಾರತದ ವಾಯುಗಡಿ ಉಲ್ಲಂಘಿಸಿ ಒಳ ಪ್ರವೇಶಿಸಿದ್ದಕ್ಕೆ ಭಾರತೀಯ ವಾಯುಪಡೆ ಅದನ್ನು ಬಲವಂತವಾಗಿ ಇಳಿಸಿದೆ.

ಜಾರ್ಜಿಯಾಕ್ಕೆ ಹೊರಟಿದ್ದ ಸರಕು ಸಾಗಣೆ ವಿಮಾನವು ಮಧ್ಯಾಹ್ನ 3.15ರ ಸುಮಾರಿಗೆ ಉತ್ತರ ಗುಜರಾತ್ ವಲಯದಲ್ಲಿ ಭಾರತೀಯ ವಾಯುನೆಲೆಯನ್ನು ಪ್ರವೇಶಿಸಿರುವುದನ್ನು ಭಾರತೀಯ ವಾಯುಪಡೆಯ ರೇಡಾರ್‌ಗಳು ಪತ್ತೆಹಚ್ಚಿದ್ದವು.

ಕೂಡಲೇ ಕಾರ್ಯಪ್ರವೃತ್ತಗೊಂಡ ವಾಯುಪಡೆ ಎರಡು ಸುಖೋಯ್ ಸು-30 ಯುದ್ಧವಿಮಾನಗಳನ್ನು ಕಳುಹಿಸಿ ವಿಮಾನವನ್ನು ಜೈಪುರದಲ್ಲಿ ಕೆಳಕ್ಕಿಳಿಸುವಂತೆ ಮಾಡಿತು.

IAF jets forced plane from karachi to land after deviating in indian space

ಭಾರತೀಯ ವಾಯುಪಡೆ ರವಾನಿಸಿದ ರೇಡಿಯೋ ಕರೆಗಳನ್ನು ವಿಮಾನದ ಸಿಬ್ಬಂದಿ ಸ್ವೀಕರಿಸಲಿಲ್ಲ. ಅಲ್ಲದೆ ಮಾರ್ಗ ಬದಲಾವಣೆಗೊಂಡು 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಕೊನೆಗೆ ವಾಯುಪಡೆ ಬಲವಂತವಾಗಿ ಕೆಳಕ್ಕಿಳಿಸಿತು.

ಈ ವಿಮಾನವು ಎಲ್ಲ ಅಗತ್ಯ ಅನುಮತಿಗಳನ್ನು ಹೊಂದಿತ್ತು. ಆದರೆ, ಮುಂಬೈ ಮತ್ತು ಅಹಮದಾಬಾದ್ ಎಟಿಸಿಗಳನ್ನು ಸಂಪರ್ಕಿಸಬೇಕಿತ್ತು. ಅದರ ಬದಲಾಗಿ ಭಾರತೀಯ ವಾಯುನೆಲೆಯೊಳಗೆ ಹಾರಾಟ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+