'ನಮ್ಮ ಕುಟುಂಬವನ್ನು ಅವರು ದ್ವೇಷಿಸಬಹುದು, ಆದರೆ ಮೋದಿ ಬಗ್ಗೆ ಪ್ರೀತಿ ಇದೆ'
Recommended Video
ನವದೆಹಲಿ, ಮೇ 7: "ನರೇಂದ್ರ ಮೋದಿ ಒಬ್ಬ ಹುತಾತ್ಮರನ್ನು (ರಾಜೀವ್ ಗಾಂಧಿ) ಅವಮಾನಿಸಿದ್ದಾರೆ. ಅವರು ನನ್ನ ಕುಟುಂಬವನ್ನು ಎಷ್ಟು ದ್ವೇಷಿಸುತ್ತಾರೆ ಎಂಬುದು ವಿಷಯವಲ್ಲ. ಆದರೆ ನನಗೆ ಮಾತ್ರ ಅವರ ಬಗ್ಗೆ ಪ್ರೀತಿ ಇದೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ನವದೆಹಲಿಯ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರಪ್ರದೇಶದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿಯನ್ನು ಗುರಿ ಮಾಡಿಕೊಂಡು ವಾಗ್ದಾಳಿ ನಡೆಸಿದ್ದರು.
ನಿಮ್ಮ ತಂದೆ ತಮ್ಮ ರಾಜ್ಯಭಾರದಲ್ಲಿ "ಮಿಸ್ಟರ್ ಕ್ಲೀನ್" ಎನಿಸಿಕೊಂಡಿದ್ದರು. ಆದರೆ ಅವರ ಜೀವನ ಭ್ರಷ್ಟಾಚಾರಿ ನಂಬರ್ ಒನ್ ಎಂದು ಕೊನೆಯಾಯಿತು ಎಂಬ ಟೀಕೆ ಮಾಡಿದ್ದರು. ಆ ನಂತರ ವಿಪಕ್ಷ ನಾಯಕರಿಂದ ಮೋದಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸೋಮವಾರದಂದು ಕೂಡ ರಾಜೀವ್ ಗಾಂಧಿ ಅವರ ವಿಚಾರವನ್ನು ಮೋದಿ ಎತ್ತಿದ್ದಾರೆ.

ಬೋಫೋರ್ಸ್ ಪ್ರಕರಣದ ಆರೋಪಿ ರಾಜೀವ್ ಗಾಂಧಿ ಹೆಸರಿನಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೋರಾಡಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.












Click it and Unblock the Notifications