ನೂತನ ಸಂಸತ್ ಭವನ ಆತ್ಮನಿರ್ಭರ ಭಾರತ ಸೃಷ್ಟಿಗೆ ಸಾಕ್ಷಿ: ಮೋದಿ

ನವದೆಹಲಿ, ಡಿಸೆಂಬರ್ 10: ಹಳೆದ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯದ ನಂತರ ಭಾರತಕ್ಕೆ ಹೊಸ ನಿರ್ದೇಶನ ನೀಡಿತು. ಹೊಸ ಕಟ್ಟಡವು ಆತ್ಮನಿರ್ಭರ ಭಾರತಕ್ಕೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

*ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸುವ ಕೆಲಸವನ್ನು ಮಾಡಲಾಯಿತು. ಹೊಸ ಕಟ್ಟಡದಲ್ಲಿ 21ನೇ ಶತಮಾನದ ಭಾರತದ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲಾಗುತ್ತದೆ ಎಂದು ಹೇಳಿದರು.

*ಭಾರತದಲ್ಲಿ ಪ್ರಜಾಪ್ರಭುತ್ವ ಒಂದು ಸಂಸ್ಕೃತಿ. ಪ್ರಜಾಪ್ರಭುತ್ವವು ಒಂದು ಜೀವನ ಮೌಲ್ಯ. ಒಂದು ಜೀವನ ವಿಧಾನವಾಗಿದೆ.ಭಾರತದ ಪ್ರಜಾಪ್ರಭುತ್ವವು ಶತಮಾನಗಳ ಅನುಭವದೊಂದಿಗೆ ಅಭಿವೃದ್ಧಿಪಡಿಸಿದ ವ್ಯವಸ್ಥೆಯಾಗಿದೆ ಎಂದರು.

Highlights Of PM Narendra Modi Speech At Bhoomi Puja Of New Parliament Building

*ನಾವು ಭಾರತ ಮೊದಲು ಎನ್ನುವ ಪ್ರತಿಜ್ಞೆಯನ್ನು ಮಾಡೋಣ, ನಮ್ಮ ನಿರ್ಧಾರಗಳು ರಾಷ್ಟ್ರವನ್ನು ಬಲಪಡಿಸಬೇಕು ಮತ್ತು ಅದೇ ಪ್ರಮಾಣದಲ್ಲಿ ಅಳೆಯಬೇಕು. ಮುಂದಿನ 25-26 ವರ್ಷಗಳಲ್ಲಿ 100 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತ ಹೇಗೆ ನೋಡಬೇಕೆನ್ನುವ ಕನಸು ಹೊತ್ತು ಸಾಗಿರಿ ಎಂದು ಸಲಹೆ ನೀಡಿದರು.

*ಹಳೆಯ ಸಂಸತ್ ಭವನವು ಸ್ವಾತಂತ್ರ್ಯೋತ್ತರ ಭಾರತಕ್ಕೆ ನಿರ್ದೇಶನ ನೀಡಿದರೆ ಹೊಡ ಕಟ್ಟಡವು ಆತ್ಮನಿರ್ಭರ ಭಾರತ ಸೃಷ್ಟಿಗೆ ಸಾಕ್ಷಿಯಾಗುತ್ತದೆ.

* ವಾಸ್ತವವಾಗಿ 3,015 ಚ.ಮೀಟರ್ ವಿಸ್ತೀರ್ಣದಲ್ಲಿ ಲೋಕಸಭೆ ನಿರ್ಮಾಣಲಿದ್ದು, 1,145 ಚ.ಮೀಟರ್ ವಿಸ್ತೀರ್ಣದಲ್ಲಿ 543 ಆಸನಗಳ ಬದಲಿಗೆ 888 ಆಸನಗಳ ವ್ಯವಸ್ಥೆ ಮಾಡಲಾಗುವುದು.

* 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆ ನಿರ್ಮಾಣವಾಗಲಿದ್ದು, 1,232 ಚ.ಮೀಟರ್ ವಿಸ್ತೀರ್ಣದಲ್ಲಿ 245 ಸ್ಥಾನಗಳ ಬದಲಾಗಿ 384 ಆಸನಗಳು ಇರಲಿವೆ ಎಂದು ತಿಳಿದುಬಂದಿದೆ.

* ಪ್ರತಿ ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿದ್ದು ಜಂಟಿ ಅಧಿವೇಶನ ನಡೆಯುವ ಸಮಯದಲ್ಲಿ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕೂರಲು ಅವಕಾಶ ಕಲ್ಪಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+