Breaking: ಒಂದೇ ದಿನ 5661 ಹೊಸ ಕೇಸ್ ಪತ್ತೆ, 140 ಮಂದಿ ಸಾವು

ದೆಹಲಿ, ಮೇ 20: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ ದೇಶಾದ್ಯಂತ 5611 ಹೊಸ ಪ್ರಕರಣಗಳು ದಾಖಲಾಗಿದೆ. ಈವರೆಗಿನ ಅಂಕಿ ಅಂಶಗಳ ಪೈಕಿ ದಿನವೊಂದರಲ್ಲಿ ಪತ್ತೆಯಾದ ಅತಿ ಹೆಚ್ಚು ಸೋಂಕು ಇದಾಗಿದೆ.

ಕಳೆದ 24 ಗಂಟೆಯಲ್ಲಿ 140 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲೂ ನಿನ್ನೆ ದಾಖಲೆ ಬರೆದಿದೆ. ಈ ಮೂಲಕ ಒಟ್ಟಾರೆ ಭಾರತದಲ್ಲಿ ಕೊವಿಡ್ ಪ್ರಕರಣ ಸಂಖ್ಯೆ 106750ಕ್ಕೆ ಜಿಗಿದಿದೆ.

ಪ್ರಸ್ತುತ ದೇಶದಲ್ಲಿ 61149 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆ ಹಾಗೂ ಕೊವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 3303 ಜನರು ಕೊರೊನಾಗೆ ಬಲಿಯಾಗಿದ್ದಾರೆ.

Highest Ever Spike Of 5611 COVID19 Cases In Last 24 Hours

ಮೇ 19ರಂದು ಬೆಳಿಗ್ಗೆ ಪ್ರಕಟವಾದ ವರದಿಯಲ್ಲಿ ಒಂದೇ ದಿನ 4,970 ಕೇಸ್ ಪತ್ತೆಯಾಗಿತ್ತು. 134 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದರು.

ಮೇ 18ರಂದು ಬಿಡುಗಡೆಯಾದ ವರದಿಯಲ್ಲಿ ಒಂದೇ ದಿನ 5242 ಹೊಸ ಕೇಸ್ ದಾಖಲಾಗಿತ್ತು. 157 ಮಂದಿ ಸಾವನ್ನಪ್ಪಿದ್ದರು. ಹೀಗೆ, ಕಳೆದ ಹದಿನೈದು ದಿನದಿಂದ ದೇಶದಲ್ಲಿ ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+