ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್, ಹೃದಯ ಸಂಬಂಧಿ ಔ‍ಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯ

By Vanitha
|
Google Oneindia Kannada News

ನವದೆಹಲಿ, ನವೆಂಬರ್, 17: ಹೃದಯ ಮತ್ತು ಕ್ಯಾನ್ಸರ್ ಔ‍ಷಧಿಗಳನ್ನು ಶೇ.50 ರಿಂದ 60ರಷ್ಟು ರಿಯಾಯಿತಿ ದರದಲ್ಲಿ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದು 'ಅಮೃತ್' (AMRIT- Affordable Medicines and Reliable Implants for Treatment) ಎಂಬ ಯೋಜನೆಯ ಅಡಿಯಲ್ಲಿ ಸಾರ್ವಜನಿಕರಿಗೆ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಅಧಿಕವಾಗುತ್ತಿದೆ. 1990ರ ಈಚೆಗೆ ಈ ರೋಗಿಗಳ ಸಂಖ್ಯೆ ಶೇ 60 ರಷ್ಟು ಹೆಚ್ಚಿದೆ, ಹಾಗಾಗಿ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಒದಗಿಸಿ ಕಾಯಿಲೆಯನ್ನು ತಡೆಗಟ್ಟಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.[ನಗುತ್ತಾ,ನಗಿಸುತ್ತಿದ್ದರೆ ಹೃದಯ ಆರೋಗ್ಯ ನಿಮ್ಮಂತೆ ಹಸನ್ಮುಖಿ]

Heart disease and cancer drugs 50 to 60% discount

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಸುಮಾರು 202 ಔ‍ಷಧಿಗಳು, ಹೃದ್ರೋಗದ 186 ಔಷಧಿಗಳು,'ಅಮೃತ್' ಯೋಜನೆ ಮೂಲಕ ಅಗ್ಗವಾಗಿ ದೊರೆಯಲಿವೆ. ಸಾಮಾನ್ಯ ವರ್ಗದವರು ತೀರಾ ದುಬಾರಿಯಾದ ಈ ಔಷಧಿಗಳನ್ನು ಕೊಂಡುಕೊಳ್ಳಲು ಹೆಣಗಾಡುತ್ತಿದ್ದರು. ಆಸ್ಪತ್ರೆಗಳ ಕಡೆಗೆ ತೆರಳುವ ವಿಚಾರವನ್ನೇ ಮರೆತಿದ್ದಾರೆ. ಇದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರೋಗ್ಯ ಸಚಿವ ಜೆಪಿ ನಾಡ್ಡ ಹೇಳಿದರು.

ಪ್ರತಿವರ್ಷ ಸುಮಾರು 700,000 ಮಿಲಿಯನ್ ಮಂದಿ ಕ್ಯಾನ್ಯರ್ ರೋಗಕ್ಕೆ ತುತ್ತಾದರೆ, 2.8 ಮಿಲಿಯನ್ ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇದರಲ್ಲಿ ಸುಮಾರು 145,000 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅಲ್ಲದೇ ಕೆಮೋಥೆರಪಿ, ಚುಚ್ಚುಮದ್ದು(13,440), ಇನ್ನಿತರ ಔಷಧಿಗಳ ವೆಚ್ಚ ಲಕ್ಷಕ್ಕೂ ಹೆಚ್ಚು ದಾಟುತ್ತಿತ್ತು.['ಹೃದಯ'ವಂತೆ ರೀನಾ ಸಮಾಜ ಸೇವಾ ಸಂಸ್ಥೆಗೆ 5 ವರ್ಷ]

ಈ ಅಮೃತ್ ಯೋಜನೆ ಮೂಲಕ ಪ್ರಪಂಚದ ಪ್ರತಿಷ್ಠಿತ ಆಸ್ಪತ್ರೆಗಳ ಮೂಲಕ ಸಂಧಾನ ಮಾಡಿಕೊಳ್ಳಲಾಗಿದೆ. ಇದರಿಂದ ಲಕ್ಷಾಂತರ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ.

English summary
The central government implement the new project name of AMRIT( Affordable Medicines and Reliable Implants for Treatment). It will give Heart disease and cancer drugs 50-60% discount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X