'ನೆಹರೂ, ಇಂದಿರಾ ನಂತರ ಮೋದಿ ಅತ್ಯಂತ ಯಶಸ್ವಿ ಪಿಎಂ'

ಜವಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ನಂತರ ನರೇಂದ್ರ ಮೋದಿ ಅವರು ಭಾರತದ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿ ಎಂದು ಇತಿಹಾಸಗಾರ ರಾಮಚಂದ್ರ ಗುಹಾ ಅವರು ಹೊಗಳಿದ್ದಾರೆ.

ನವದೆಹಲಿ, ಮಾರ್ಚ್ 30: ಜವಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ನಂತರ ನರೇಂದ್ರ ಮೋದಿ ಅವರು ಭಾರತದ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿ ಎಂದು ಇತಿಹಾಸಗಾರ ರಾಮಚಂದ್ರ ಗುಹಾ ಅವರು ಹೊಗಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್(ಎಲ್​ಎಸ್​ಇ) ಭಾರತೀಯ ಸಮ್ಮೇಳನ 2017ರಲ್ಲಿ ಗುರುವಾರದಂದು ಗುಹಾ ತಮ್ಮ ಭಾಷಣದ ವೇಳೆ ಮೋದಿ ಅವರನ್ನು ಹೊಗಳಿದರು.

Guha says Modi third most successful PM after Nehru, Indira

ಪ್ರಧಾನಿ ಮೋದಿ ಅವರ ವರ್ಚಸ್ಸು ಮತ್ತು ಸಮಗ್ರ ಭಾರತದ ದೃಷ್ಟಿ ಅವರನ್ನು ಉನ್ನತ ಸ್ಥಾನಕ್ಕೇರಿಸಿದೆ. ಮೊದಲ ಪ್ರಧಾನಿ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರ ಸಾಲಲ್ಲಿ ಪ್ರಧಾನಿ ಮೋದಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

ಜಾತಿ, ಭಾಷೆ, ಧಾರ್ವಿುಕ ವಿಚಾರಗಳನ್ನು ಮೀರಿ ರಾಷ್ಟ್ರವನ್ನು ಒಗ್ಗೂಡಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಭಾರತದ ಹಿನ್ನಡೆಗೆ ಜಾತಿ ವ್ಯವಸ್ಥೆ ಮತ್ತು ಮಹಿಳಾ ತಾರತಮ್ಯ, ಇವೆರಡು ಸಾಮಾಜಿಕ ಪಿಡುಗುಗಳು ಕಾರಣ. ಜಾತಿ ಆಧಾರಿತ ಪೈಶಾಚಿಕ ವ್ಯವಸ್ಥೆಯನ್ನು ನಾವು ಹಿಂದುಗಳು ಸೃಷ್ಟಿಸಿಕೊಂಡಿದ್ದೇವೆ. ಎರಡನೇ ಅತ್ಯಂತ ಕೆಟ್ಟ ಪ್ರವೃತ್ತಿ ಮಹಿಳೆಯರ ವಿರುದ್ಧದ ದೌರ್ಜನ್ಯ. ಇಸ್ಲಾಂ ಮತ್ತು ಹಿಂದು ಧರ್ಮಗಳಲ್ಲಿ ಧಾರ್ವಿುಕ ವಿಚಾರವಾಗಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+