ಜಿಎಸ್ ಟಿಯಿಂದ ಸರ್ಕಾರಕ್ಕೆ ಹಿತ, ಶ್ರೀಸಾಮಾನ್ಯನಿಗೆ ಹೊಡೆತ!

ನವದೆಹಲಿ, ಜುಲೈ 8: ಕೇಂದ್ರ ಸರ್ಕಾರ ಜುಲೈ 1 ರಂದು ದೇಶದಾದ್ಯಂತ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಸರ್ಕಾರಕ್ಕಷ್ಟೇ ಲಾಭ ಮಾಡಿಕೊಡುತ್ತದೆ, ಸಾಮಾನ್ಯ ಜನರಿಗಲ್ಲ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಭಿಪ್ರಾಯಪಟ್ಟರು.

ನವದೆಹಲಿಯಲ್ಲಿಂದು (ಜು.8) ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಎಂಬ ಜಿಎಸ್ ಟಿ ವ್ಯಾಖ್ಯಾನವನ್ನು ಪರೋಕ್ಷವಾಗಿ ಮೂದಲಿಸಿ, 'ಗುಡ್' ಎಂಬುದು ಸರ್ಕಾರಕ್ಕಷ್ಟೇ ಎಂದರು!

GST is good only for government not for people: Kapil Sibal

ಜಿಎಸ್ ಟಿಯಿಂದ ಸರ್ಕಾರಕ್ಕೆ ಹಿತವಿದ್ದರೂ, ಶ್ರೀಸಾಮಾನ್ಯನಿಗೆ ಇದು ಹೊಡೆತವೇ ಆಗಲಿದೆ ಎಂದು ಅವರು ಹೇಳಿದರು.

ಜುಲೈ 1 ರಂದು ಜಮ್ಮು ಕಾಶ್ಮೀರವನ್ನು ಹೊರತು ಪಡಿಸಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಿದ್ದ ಜಿಎಸ್ ಟಿ, ಜು.7 ರಂದು ಜಮ್ಮು ಕಾಶ್ಮೀರದಲ್ಲೂ ಜಾರಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+