• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಭೀತಿ: ಮತದಾನ ನಿಯಮದಲ್ಲಿ ಮಹತ್ವದ ಬದಲಾವಣೆ

|

ದೆಹಲಿ, ಜುಲೈ 2: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯಕ್ಕೆ ಈ ಬಿಕ್ಕಟ್ಟು ಕಡಿಮೆಯಾಗುವ ಯಾವುದೇ ಸಾಧ್ಯತೆ ಇಲ್ಲ. ಹೀಗಾಗಿ ಮತದಾನ ನಿಯಮದಲ್ಲಿ ಸರ್ಕಾರವೂ ಮಹತ್ವದ ಬದಲಾವಣೆ ಮಾಡಿದೆ.

   China conflict results raise in Covid Medicine price | Oneindia Kannada

   ಕೊರೊನಾ ಭೀತಿ ಹಿನ್ನೆಲೆ ಕೆಲವು ನಿರ್ದಿಷ್ಟ ನಿಯಮಗಳನ್ನು ಸರ್ಕಾರ ಜಾರಿ ಮಾಡಿದ್ದು, ಮುಂಬರುವ ಚುನಾವಣೆಗಳಲ್ಲಿ ಇದು ಅನ್ವಯವಾಗಲಿದೆ ಎಂದು ಸೂಚಿಸಿದೆ.

   ಕೋವಿಡ್-19: ಚೇತರಿಸಿಕೊಂಡ ಪ್ರಕರಣಗಳ ಅಗ್ರ 15 ರಾಜ್ಯಗಳು ಇಲ್ಲಿವೆ

   ಸದ್ಯಕ್ಕೆ ಯಾವುದೇ ಚುನಾವಣೆ ಘೋಷಣೆಯಾಗಿಲ್ಲ. ಆದರೆ, ಬಿಹಾರದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಗಾಗಿಯೇ ಹೊಸ ನಿಯಮ ಜಾರಿ ಮಾಡಿದೆ. ಅಷ್ಟಕ್ಕೂ, ಏನು ಆ ನಿಯಮಗಳು? ಮುಂದೆ ಓದಿ...

   ಅಂಚೆ ಮತದಾನ ವ್ಯಾಪ್ತಿ ವಿಸ್ತರಣೆ

   ಅಂಚೆ ಮತದಾನ ವ್ಯಾಪ್ತಿ ವಿಸ್ತರಣೆ

   1961ರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾರುವ ಸರ್ಕಾರ ಮತದಾನ ವ್ಯಾಪ್ತಿಯನ್ನು ವಿಸ್ತರಣೆ ಮಾಡಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ 65 ವರ್ಷದ ಮೇಲ್ಪಟ್ಟವರು ಅಂಚೆ ಮತಪತ್ರವನ್ನು ಬಳಸಿ ತಮ್ಮ ಮತ ಚಲಾಯಿಸಬಹುದು ಎಂದು ಸರ್ಕಾರ ಆದೇಶಿಸಿದೆ.

   ಹೋಮ್ ಕ್ವಾರಂಟೈನ್‌ನಲ್ಲಿದ್ದರೂ ಅಂಚೆ ಮತದಾನ

   ಹೋಮ್ ಕ್ವಾರಂಟೈನ್‌ನಲ್ಲಿದ್ದರೂ ಅಂಚೆ ಮತದಾನ

   ಕಾನೂನು ಮತ್ತು ನ್ಯಾಯ ಸಚಿವಾಲಯ ಮತದಾನ ನಿಯಮಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟ ಮಾಡಿದ್ದು, ಕೊರೊನಾ ವೈರಸ್‌ಗೆ ತುತ್ತಾಗಿರುವ ವ್ಯಕ್ತಿ ಕ್ವಾರಂಟೈನ್ ಕೇಂದ್ರ ಅಥವಾ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದರೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಹುದು. ಇನ್ನು ಸೋಂಕಿತನ ಸಂಪರ್ಕದಲ್ಲಿದ್ದ ಕಾರಣ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಿದ್ದರೆ ಅಂತವರೂ ಅಂಚೆ ಪತ್ರದ ಮೂಲಕ ವೋಟ್ ಹಾಕಬಹುದು ಎಂದು ವಿವರಿಸಿದೆ.

   ಕೊರೊನಾ ಬಂದಾಗಿನಿಂದ ಮೋದಿ ಎಂದಾದರೂ ಹೊರಗಡೆ ಬಂದಿದ್ದಾರಾ?

   ಯೋಧರಿಗೆ ಮತ್ತು ಸಿಬ್ಬಂದಿಗೆ ಮಾತ್ರ ಇತ್ತು

   ಯೋಧರಿಗೆ ಮತ್ತು ಸಿಬ್ಬಂದಿಗೆ ಮಾತ್ರ ಇತ್ತು

   ಇದಕ್ಕೂ ಮುಂಚೆ ಅಂಚೆ ಪತ್ರದ ಮೂಲಕ ಮತದಾನ ಮಾಡುವ ಹಕ್ಕು ಗಡಿಕಾಯುವ ಯೋಧರಿಗೆ ಮತ್ತು ಚುನಾವಣೆ ಕಾರ್ಯನಿರತರಾಗಿದ್ದ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಇತ್ತು. ಇದೀಗ, ಚುನಾವಣಾ ನಿಯಮವನ್ನು ಸರ್ಕಾರ ತಿದ್ದುಪಡಿ ಮಾಡಿದ್ದು, ಕೊರೊನಾ ಹಿನ್ನೆಲೆ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೂ ಈ ನಿಯಮ ಸೇರಿಸಿದೆ.

   ದೆಹಲಿ ಪ್ರಯೋಗ ಮಾಡಲಾಗಿತ್ತು

   ದೆಹಲಿ ಪ್ರಯೋಗ ಮಾಡಲಾಗಿತ್ತು

   ಇದಕ್ಕೂ ಮುಂಚೆ ದೆಹಲಿಯಲ್ಲಿ ಇಂತಹದೊಂದು ಪ್ರಯೋಗ ಮಾಡಲಾಗಿತ್ತು. ತೀವ್ರ ವಿಕಲಾಂಗಚೇತನ ಅಥವಾ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಪತ್ರದ ಮತದಾನಕ್ಕೆ ಫೆಬ್ರವರಿ ತಿಂಗಳಲ್ಲಿ ದೆಹಲಿ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಕೊರೊನಾ ಬಿಕ್ಕಟ್ಟಿನ ನಡುವೆ ರಾಜ್ಯಸಭೆ ಚುನಾವಣೆ ನಡೆದಿದ್ದು, ಈ ವೇಳೆ ಸೋಂಕಿತ ಶಾಸಕರು ಪಿಪಿಇ ಕಿಟ್ ಧರಿಸಿ ಸದನಕ್ಕೆ ಬಂದ ಮತದಾನ ಮಾಡಿದ್ದನ್ನು ಸ್ಮರಿಸಬಹುದು.

   English summary
   Govt extending Postal Ballot Facility for electors above age of 65 yrs & Covid+be under home/institutional quarantined.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more