ಬಿಹಾರದಲ್ಲಿ ನೂತನ ಸರ್ಕಾರದ ಮೊದಲ ಅಧಿವೇಶನ: ವಿಶೇಷತೆಗಳು ಇಲ್ಲಿವೆ

ಪಾಟ್ನಾ, ನವೆಂಬರ್.23: ಬಿಹಾರದಲ್ಲಿ ನೂತನ ಸಚಿವರ ಸಂಪುಟ ರಚನೆ ಬೆನ್ನಲ್ಲೇ ಅಧಿವೇಶನ ಆರಂಭವಾಗಲಿದೆ. ಸೋಮವಾರದಿಂದ ರಾಜ್ಯದಲ್ಲಿ ನೂತನ ಸರ್ಕಾರದ ಮೊದಲ ಅಧಿವೇಶನವು ಆರಂಭವಾಗಲಿದ್ದು, ಐದು ದಿನಗಳವರೆಗೂ ಕಲಾಪ ನಡೆಯಲಿದೆ.

ನವೆಂಬರ್.23 ಅಥವಾ 24ರಂದು ವಿಧಾನಸಭಾ ಸಭಾಪತಿಯಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ವಿಧಾನಸಭೆಯ ಸಭಾಪತಿ ಸ್ಧಾನಕ್ಕೆ ನವೆಂಬರ್.25ರಂದು ಚುನಾವಣೆ ನಡೆಯಲಿದೆ.

ಬಿಹಾರ ರಾಜ್ಯಪಾಲ ಫಾಗು ಚೌಹಾನ್ ನ.26ರಂದು ಉಭಯ ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನದ ಕೊನೆಯ ದಿನ ನವೆಂಬರ್.27ರಂದು ವಿಧಾನಸಭೆಯ ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರಿಗೆ ಧನ್ಯವಾದಗಳು ತಿಳಿಸಲಾಗುತ್ತದೆ. ಇದರ ಮಧ್ಯೆ ಕಲಾಪಗಳಲ್ಲಿ ಯಾವ ವಿಷಯಗಳು ಚರ್ಚೆ ಆಗಬಹುದು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.

First Session Of Newly-Constituted Bihar Legislative Assembly From Nov.23

ಬಿಹಾರ ಮೊದಲ ಅಧಿವೇಶನದ ಪ್ರಮುಖ ವಿಷಯಗಳು:

- ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ದೃಷ್ಟಿಯಿಂದ ಈ ಬಾರಿ ಬಿಹಾರ ವಿಧಾನಸಭೆಯ ಸಭೆಗಳನ್ನು ಸೆಂಟ್ರಲ್ ಹಾಲ್‌ನಲ್ಲಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.

- ವಿಧಾನಸಭಾ ಸಭಾಂಗಣದಲ್ಲಿ ಬಿಹಾರ ವಿಧಾನ ಪರಿಷತ್ತಿನ ಸಭೆ ನಡೆಯಲಿದೆ. ಮಾನ್ಸೂನ್ ಅಧಿವೇಶನದ ಸಂದರ್ಭದಲ್ಲೂ ಕೂಡಾ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳನ್ನು ಕೂಡಾ ಬದಲಾಯಿಸಲಾಗಿತ್ತು.

- ಅಧಿವೇಶನದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಇತರರ ಕುಳಿತುಕೊಳ್ಳುವ ಆಸನ ವ್ಯವಸ್ಥೆಗಳಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲಾಗಿದೆ.

- ಉಭಯ ಸದನಗಳಲ್ಲಿ ಹಾಜರಾಗುವ ಪ್ರತಿಯೊಬ್ಬ ಸದಸ್ಯರು ಕೂಡಾ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+