ಆಸ್ಪತ್ರೆಯಲ್ಲೇ ಸಂಪುಟ ಸಭೆ ಕರೆದ ಗೋವಾ ಮುಖ್ಯಮಂತ್ರಿ ಪರಿಕ್ಕರ್
ನವದೆಹಲಿ, ಅಕ್ಟೋಬರ್ 12: ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಆಸ್ಪತ್ರೆಯಲ್ಲೇ ಇಂದು(ಅಕ್ಟೋಬರ್ 12) ಸಂಪುಟ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಗೋವಾ ಮೈತ್ರಿ ಸರ್ಕಾರದ ಆಡಳಿತ ಬಗ್ಗೆ ಮಾಹಿತಿ ಪಡೆಯಲಿರುವ ಪರಿಕ್ಕರ್, ಸಂಪುಟ ವಿಸ್ತರಣೆಯ ಕುರಿತೂ ಇದೇ ಸಂದರ್ಭದಲ್ಲಿ ಚರ್ಚೆ ನಡೆಸಲಿದ್ದಾರೆ.
ಸೆಪ್ಟೆಂಬರ್ 15 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ 62 ವರ್ಷ ವಯಸ್ಸಿನ ಮನೋಹರ್ ಪರಿಕ್ಕರ್, ಫ್ಯಾಂಕ್ರಿಯಾಸ್ ಸಮಸ್ಯೆಯಿಂದ ಬಳಲುತ್ತಿರುವ ಅವರು ಕೆಲವು ತಿಂಗಳ ಹಿಂದೆ ವಿದೇಶದಲ್ಲೂ ಚಿಕಿತ್ಸೆ ಪಡೆದಿದ್ದರು.

ಅನಾರೋಗ್ಯದ ಕಾರಣ ಬಳಲುತ್ತಿದ್ದರು ಮನೋಹರ್ ಪರಿಕ್ಕರ್ ಅವರನ್ನೇ ಬಿಜೆಪಿಯು ಮುಖ್ಯಮಂತ್ರಿಯನ್ನಾಗಿ ಉಳಿಸಿಕೊಂಡಿರುವುದೇಕೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಕಾರಣಕ್ಕೆ ಗೋವಾ ಸರ್ಕಾರದ ಸಂಪುಟದಿಂದ ಇಬ್ಬರು ಸಚಿವರನ್ನು ಕೈಬಿಡಲಾಗಿತ್ತು. ಅನಾರೋಗ್ಯದ ಕಾರಣದಿಂದ ಈ ಇಬ್ಬರು ಸಚಿವರನ್ನು ಕೈಬಿಡುವುದಾದರೆ, ಮುಖ್ಯಮಂತ್ರಿಗಳೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರನ್ನು ಯಾಕೆ ಮುಖ್ಯಮಂತ್ರಿಯಾಗಿ ಉಳಿಸಿಕೊಂಡಿದ್ದೀರಿ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.












Click it and Unblock the Notifications