ಫಲಿತಾಂಶದ ದಿನ ಟ್ರೆಂಡಿಂಗ್ ಆದ 'ಮೋದಿ ಗೋ ಬ್ಯಾಕ್' ಹ್ಯಾಶ್ ಟ್ಯಾಗ್

ನವದೆಹಲಿ, ಮೇ 23: ಇಂದು ಹದಿನೇಳನೇ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಈ ಹೊತ್ತಿನಲ್ಲಿ ಟ್ವಿಟ್ಟರ್ ನಲ್ಲಿ 'ಗೋ ಬ್ಯಾಕ್ ಮೋದಿ' ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಮತ್ತೊಮ್ಮೆ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದಿದ್ದು, ಈಗಾಗಲೇ ಬಿಜೆಪಿ ನಾಯಕರು ಮತ್ತು ಎನ್ ಡಿಎ ಮೈತ್ರಿಕೂಟದ ನಾಯಕರು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.

#ElectionResults2019 #verdict2019 ಜೊತೆಗೆ #gobackmodi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

Go Back Modi hashtag is trending on twitter on result day

'ಗೋ ಬ್ಯಾಕ್ ಮೋದಿ' ಹ್ಯಾಶ್ ಟ್ಯಾಗ್ ನಲ್ಲಿ ಹಲವರು, 'ಮತ್ತೆ ಸಂಸತ್ತಿಗೆ ವಾಪಸ್ಸಾಗಿ' ಎಂದೂ ಹಾರೈಸಿದ್ದು, ಪಾಸಿಟಿವ್ ಕಮೆಂಟ್ ಗಳೂ ಯಥೇಚ್ಛವಾಗಿವೆ. ಆದರೆ ಕೆಲವರು, "ಫಲಿತಾಂಶದ ದಿನ ಗೋ ಬ್ಯಾಕ್ ಮೋದಿ ಟ್ರೆಂಡಿಂಗ್ ಆಗಿದ್ದರೂ ಭಕ್ತರು ಈಗಲೂ ಎಕ್ಸಿಟ್ ಪೋಲ್ ಮೇಲೇ ನಂಬಿಕೆ ಇಟ್ಟಿದ್ದಾರೆ" ಎಂದಿದ್ದಾರೆ.

ಒಟ್ಟಿನಲ್ಲಿ ಮೋದಿ ವಿರುದ್ಧ ಆರಂಭವಾದ ಈ ಹ್ಯಾಶ್ ಟ್ಯಾಗ್ ಗೆ ಬಿಜೆಪಿ ಯಾವ ರೀತಿಯ 'ಕೌಂಟರ್' ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಏಪ್ರಿಲ್ 11 ರಿಂದ ಮೇ 19 ರವೆರೆಗೆ ಏಳು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಮೇ 23 ರಂದು ಪ್ರಕಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+