ಬೈಕ್ ಇಲ್ಲ ಅಂತ ಲೇವಡಿ ಮಾಡಿದ ಪ್ರೇಯಸಿ: ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಿಯಕರ!

''ನಿನ್ನ ಹತ್ತಿರ ಏನಿದೆ? ಒಂದು ಬೈಕ್ ಕೂಡ ಇಲ್ಲ!'' - ಹೀಗಂತ ಪ್ರೇಮಿಗಳ ದಿನದಂದು ಪ್ರೇಯಸಿ ಲೇವಡಿ ಮಾಡಿದ್ದಾಳೆ. ಇದರಿಂದ ಬೇಸೆತ್ತ ಪ್ರಿಯಕರ ಬೈಕ್ ಕದಿಯಲು ಆರಂಭಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಹೀಗೊಂದು ವಿಚಿತ್ರ ಪ್ರಕರಣ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಾಖಲಾಗಿದೆ. ಪ್ರಿಯತಮೆಯನ್ನು ಇಂಪ್ರೆಸ್ ಮಾಡಲು ದ್ವಿಚಕ್ರ ವಾಹನ ಕದಿಯುತ್ತಿದ್ದ ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಒಂದು ಬೈಕ್ ಇಲ್ಲ ಅಂತ ಗೆಳತಿ ಮೂತಿ ತಿರುಗಿಸಿದ್ದಕ್ಕೆ, ಲಲಿತ್ ಎಂಬ ಭೂಪ ಏಳು ಬೈಕ್ ಕದಿದ್ದ. ಎಂಟನೇ ಬೈಕ್ ಕದ್ದು ಶೋಕಿ ಮಾಡುತ್ತಿದ್ದಾಗ ಲಲಿತ್ ಮತ್ತು ಆತನ ಸ್ನೇಹಿತನನ್ನ ಪೊಲೀಸರ ಬಂಧಿಸಿದ್ದಾರೆ.

ಬಿಹಾರ ಮೂಲದ ಲಲಿತ್

ಬಿಹಾರ ಮೂಲದ ಲಲಿತ್

ಒಂಬತ್ತನೇ ಕ್ಲಾಸ್ ಓದಿರುವ ಬಿಹಾರ ಮೂಲದ ಲಲಿತ್ ಎಂಬಾತ ಶೋಕಿಲಾಲ. ಗರ್ಲ್ ಫ್ರೆಂಡ್ ಗಾಗಿ ಸದಾ ಪಾರ್ಟಿ ಮಾಡುವ ಲಲಿತ್ ಗೆ ಮೊನ್ನೆ ಪ್ರೇಮಿಗಳ ದಿನದಂದು ಸಿಕ್ಕಾಪಟ್ಟೆ ಬೇಜಾರಾಗಿತ್ತು. ಅದಕ್ಕೆ ಕಾರಣ ''ಬೈಕ್ ಇಲ್ಲ'' ಅಂತ ಗೆಳತಿ ಆಡಿದ್ದ ಮಾತು. ಪ್ರೇಯಸಿ ಮಾಡಿದ್ದ ಲೇವಡಿಯಿಂದ ಸಿಟ್ಟಿಗೆದ್ದ ಲಲಿತ್, ಒಂದು ಬೈಕ್ ಬದಲು ಹಲವು ಬೈಕ್ ಗಳಿಗೆ ಒಡೆಯನಾಗಲು ಕದಿಯುವ ಕೆಲಸಕ್ಕೆ ಕೈ ಹಾಕಿದ್ದ.

ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ.?

ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ.?

ಸ್ನೇಹಿತ ಸಾಹೀದ್ ಜೊತೆಗೆ ಸೇರಿ ಲಲಿತ್ ಏಳು ಬೈಕ್ ಗಳನ್ನು ಕದ್ದಿದ್ದ. ಸಾಲದಕ್ಕೆ ಆಟೋ ಕದಿಯಲು ಇವರಿಬ್ಬರು ಸಂಚು ರೂಪಿಸಿದ್ದರು. 1.8 ಲಕ್ಷ ಮೌಲ್ಯದ ಬೈಕ್ ಕದ್ದು ನಂಬರ್ ಪ್ಲೇಟ್ ಇಲ್ಲದೆ ಓಡಿಸುತ್ತಿದ್ದಾಗ, ಪೊಲೀಸರಿಗೆ ಅನುಮಾನ ಬಂದು ಬೈಕ್ ನ ಮಾಹಿತಿ ಸಂಗ್ರಹಿಸಿದ್ದಾರೆ. ಆಗಲೇ, ಲಲಿತ್ ಬೈಕ್ ಕಳ್ಳ ಎಂಬ ಸಂಗತಿ ಪೊಲೀಸರಿಗೆ ತಿಳಿದುಬಂದಿದೆ.

ಅಲರ್ಟ್ ಆದ ಪೊಲೀಸರು

ಅಲರ್ಟ್ ಆದ ಪೊಲೀಸರು

ಅಸಲಿಗೆ, ಬೈಕ್ ಕಳ್ಳತನದ ದೂರುಗಳು ದಾಖಲಾಗುತ್ತಿದ್ದಂತೆಯೇ ಕಳ್ಳನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ದ್ವಾರಕಾದಲ್ಲಿ ಬೈಕ್ ಕಳ್ಳ ಇದ್ದಾರೆ ಎಂಬ ಖಚಿತ ಮಾಹಿತಿ ತಿಳಿದುಬರುತ್ತಿದ್ದಂತೆಯೇ, ಅಲ್ಲಿನ ಪೊಲೀಸರು ಅಲರ್ಟ್ ಆದರು. ಅದೇ ಸಮಯಕ್ಕೆ ನಂಬರ್ ಪ್ಲೇಟ್ ಇಲ್ಲದ ಬೈಕ್ ರೈಡ್ ಮಾಡುತ್ತಿದ್ದ ಲಲಿತ್ ಮತ್ತು ಸಾಹೀದ್ ಪೊಲೀಸರಿಗೆ ಸಿಕ್ಕಿಬಿದ್ದರು.

ಕೆಟ್ಟ ಉದಾಹರಣೆ

ಕೆಟ್ಟ ಉದಾಹರಣೆ

ಸದ್ಯ ಲಲಿತ್ ಮತ್ತು ಸಾಹಿದ್ ನ ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಎಂಟು ಬೈಕ್ ಗಳನ್ನು ಕದ್ದಿರುವ ಕುರಿತು ಲಲಿತ್ ಮತ್ತು ಸಾಹೀದ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಪ್ರೇಯಸಿಗಾಗಿ ಪ್ರಿಯಕರ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇದೊಂದು ಕೆಟ್ಟ ಉದಾಹರಣೆ ಅಷ್ಟೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+