ಆಸ್ಪತ್ರೆಯ ಐಸಿಯುನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ

ಗುರುಗ್ರಾಮ, ಅಕ್ಟೋಬರ್ 29: ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಕೇಳಿಬಂದಿದೆ.

ಕ್ಷಯ ರೋಗದಿಂದ ಬಳಲುತ್ತಿದ್ದ ಯುವತಿಯನ್ನು ಐಸಿಯುನಲ್ಲಿ ಇರಿಸಿದ್ದರು, ಅಲ್ಲಿಯೇ ಎರಡು ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಕುರಿತು ಯುವತಿ ಪತ್ರದಲ್ಲಿ ನಡೆದಿದ್ದೆಲ್ಲವನ್ನೂ ಬರೆದು ತಂದೆಗೆ ನೀಡಿದ್ದು, ಪೊಲೀಸರ ಬಳಿ ದೂರು ದಾಖಲಿಸಲಾಗಿದೆ.

ನೀಡಿದ್ದ ಪತ್ರದಲ್ಲಿ ಲೈಂಗಿಕ ಕುರುಕುಳ ನೀಡಿದ್ದಾಗಿ ಬರೆಯಲಾಗಿದೆ. ಆಕೆ ಆರು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು.ಅಕ್ಟೋಬರ್ 21ರಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Girl Allegedly Raped At Gurgaon Hospital

ಬಳಿಕ ಆಕೆಯನ್ನು ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. ಆಕೆಗೆ ಉಸಿರಾಟದ ತೊಂದರೆಯೂ ಕೂಡ ಇತ್ತು.ಪೊಲೀಸರು ವಿಕಾಸ್‌ನನ್ನು ಹುಡುಕುತ್ತಿದ್ದಾರೆ. ಆಕೆಯ ಮೇಲೆ ಅಕ್ಟೋಬರ್ 21 ರಿಂದ 27ರ ಸಮಯದಲ್ಲಿ ಅತ್ಯಾಚಾರವೆಸಗಿದ್ದಾನೆ.

ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಕುಟುಂಬದವರು ಕೇಳಿಕೊಂಡಿದ್ದಾರೆ.ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ವಿಕಾಸ್‌ನನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು, ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+