ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ
Recommended Video

ನವದೆಹಲಿ, ಮೇ 21: ಜಾಗತಿಕ ಇಂಧನ ದರ ಏರಿಕೆಯ ಪರಿಣಾಮ ಭಾರತದ ಮೇಲೂ ಬೀರಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 77.48 ,ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 68.73 ರೂ. ಮುಟ್ಟಿದೆ. ಎಲ್‌ಪಿಜಿ ಪ್ರತಿ ಕೆಜಿಗೆ 41.69 ರೂ.ಆಗಿದೆ. ಕರ್ನಾಟಕದ ಚುನಾವಣೆ ಅಂತ್ಯವಾದ ಬಳಿಕ ಸತತ 7 ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿವೆ. ಸತತ 4 ವಾರಗಳಿಂದ ಇಂಧನ ದರ ಏರಿಕೆಯಾಗುತ್ತಿದೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಹ ಗ್ರಾಹಕರಿಗೆ ಬೆಲೆ ಏರಿಕೆಯನ್ನು ವರ್ಗಾವಣೆ ಮಾಡಿವೆ.
ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 33 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ 26 ಪೈಸೆ ಏರಿಕೆಯಾಗಿದೆ. ಹೀಗಾಗಿ ಒಂದು ಲೀಟರ್ ಪೆಟ್ರೋಲ್ ಬೆಲೆ 76.24ರೂ. ಡೀಸೆಲ್ 67.57 ಪೈಸೆಗೆ ಹೆಚ್ಚಾಗಿದ್ದು ದಾಖಲೆ ಮಟ್ಟ ತಲುಪಿದೆ.

ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ದೇಶದಲ್ಲಿ ಇಂಧನ ಬೆಲೆ ಹೆಚ್ಚಾಗಿರಲಿಲ್ಲ. ಬೆಲೆ ಏರಿಕೆಯಿಂದ ಈ ಅವಧಿಯಲ್ಲಾಗಿದ್ದ 500 ಕೋಟಿ ರೂ. ನಷ್ಟವನ್ನು ತೈಲ ಕಂಪನಿಗಳೇ ಭರಿಸಿವೆ. ಅದನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಪೆಟ್ರೋಲ್ ದರ 4 ರೂ. ಏರಿಕೆಯಾಗುವ ಅವಕಾಶಗಳಿವೆ. ಕರ್ನಾಟಕ ಚುನಾವಣೆ ಮುಗಿದ ಬಳಿಕ ಮೇ 14ರಿಂದ ಬೆಲೆ ಏರಿಕೆ ಪ್ರತಿದಿನ ಏರಿಕೆಯಾಗುತ್ತಿದೆ. ಭಾನುವಾರ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬೆಲೆಯನ್ನು ಹೆಚ್ಚಳ ಮಾಡಿವೆ.












Click it and Unblock the Notifications