ಫ್ರೆಂಚ್ ವಿದ್ಯಾರ್ಥಿನಿಯ ಮೇಲೆ ಸ್ನೇಹಿತೆಯ ತಂದೆಯಿಂದ ಲೈಂಗಿಕ ದೌರ್ಜನ್ಯ

ನವದೆಹಲಿ, ಅಕ್ಟೋಬರ್ 29 : ಶಾಲಾ ವಿನಿಮಯ ಕಾರ್ಯಕ್ರಮದ ಭಾಗವಾಗಿ ಭಾರತಕ್ಕೆ ಬಂದಿದ್ದ ಫ್ರಾನ್ಸ್ ನ ಶಾಲಾ ಬಾಲಕಿಯ ಮೇಲೆ, ಆಕೆಗೆ ಆತಿಥ್ಯ ನೀಡಿದ್ದ ವಿದ್ಯಾರ್ಥಿನಿಯ ತಂದೆಯೇ ಲೈಂಗಿಕವಾಗಿ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಈ ಘಟನೆ ನಡೆದು ಒಂದು ವಾರದ ನಂತರ 55 ವರ್ಷದ ವ್ಯಕ್ತಿಯ ವಿರುದ್ಧ Protection of Children from Sexual Offences (POCSO) Act, 2012 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕೇತ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಹದಿನಾರು ವರ್ಷದ ಫ್ರಾನ್ಸ್ ನ ವಿದ್ಯಾರ್ಥಿನಿ ರೂಂನಲ್ಲಿ ಏಕಾಂಗಿಯಾಗಿದ್ದಾಗ ಆ ವ್ಯಕ್ತಿ ಈ ಹೇಯ ಕೃತ್ಯ ಎಸಗಿದ್ದಾನೆ. ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ. ಆಕೆ ನೀಡಿರುವ ವಿವರಣೆ ಹೀಗಿದೆ...

French student sexually assaulted by father of Indian student

"ನಾನು ಜೈಪುರಕ್ಕೆ ಹೊರಡಲೆಂದು ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾಗ, ನನಗೆ ಸಲಹೆ ನೀಡುವ ನೆವ ಇಟ್ಟುಕೊಂಡು ಸ್ನೇಹಿತೆಯ ತಂದೆ ಕೋಣೆಯೊಳಗೆ ಬಂದ. ನಾನು ಹಾಸಿಗೆಯ ಮೇಲೆ ಕುಳಿತು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದೆ. ಆತ ನನ್ನ ಮುಂದೆಯೇ ನಿಂತು ನನ್ನನ್ನೇ ಅಸಹ್ಯವಾಗಿ ಗುರಾಯಿಸುತ್ತಿದ್ದ.

ಆತ ಬಂದು ನನ್ನನ್ನು ತಬ್ಬಿಕೊಂಡ. ಹಿಂದಿಯಲ್ಲಿ ಏನೋ ಹೇಳುತ್ತ (ನನಗದು ಅರ್ಥವಾಗಲಿಲ್ಲ) ಬಲವಂತವಾಗಿ ನನ್ನ ಸ್ತನಗಳನ್ನು ಸ್ಪರ್ಶಿಸಲು ಯತ್ನಿಸಿದ. ನನ್ನನ್ನು ಮತ್ತೆ ಬಲವಾಗಿ ತಬ್ಬಿಕೊಂಡು, ನನ್ನ ಕೈ ಹಿಡಿದು ತನ್ನ ತೊಡೆಯ ಸಂದಿನಲ್ಲಿ ತೂರಿಸಲು ಯತ್ನಿಸಿದ. ಇದರಿಂದ ನಾನು ತುಂಬಾ ಆಘಾತಗೊಂಡಿದ್ದೆ..."

ಆ ಕ್ಷಣದಲ್ಲಿ ಈ ಘಟನೆಯನ್ನು ಫ್ರೆಂಚ್ ವಿದ್ಯಾರ್ಥಿನಿ ಯಾರಿಗೂ ಹೇಳಿಲ್ಲ. ಜೈಪುರಕ್ಕೆ ಹೋಗುವಾಗ, ತನಗಾದ ಅವಮಾನದಿಂದ ತಡೆದುಕೊಳ್ಳಲಾಗದೆ, ಬಸ್ಸಿನಲ್ಲಿ ತನ್ನ ಸ್ನೇಹಿತೆಗೆ ಅಳುತ್ತ ಎಲ್ಲ ಹೇಳಿದ್ದಾಳೆ. ಸ್ನೇಹಿತೆ ಈ ಘಟನೆಯನ್ನು ಶಿಕ್ಷಕಿಯರ ಗಮನಕ್ಕೆ ತಂದಿದ್ದಾರೆ. ಶಿಕ್ಷಕಿರರು ಇದರ ವಿವರಗಳನ್ನು ಆಕೆಯ ಪೋಷಕರು ಮತ್ತು ಫ್ರೆಂಚ್ ರಾಯಭಾರಿ ಕಚೇರಿಗೆ ತಿಳಿಸಿದ್ದಾರೆ. ಕೂಡಲೆ ಆ ವಿದ್ಯಾರ್ಥಿನಿಯನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ಈ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಭಾಗಿಯಾಗಿರುವ ಶಾಲೆ ಕಳೆದ ಜೂನ್ ನಲ್ಲಿ ಫ್ರಾನ್ಸ್ ದೇಶವನ್ನು ಸಂದರ್ಶಿಸಿತ್ತು. ಆಗ, ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಮಗಳು, ಲೈಂಗಿಕ ಕಿರುಕುಳಕ್ಕೊಳಗಾಗಿರುವ ವಿದ್ಯಾರ್ಥಿನಿಯ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಈ ಕುರಿತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಭಾಗಿಯಾಗಿರುವ ಶಾಲೆ ಯಾವುದೇ ಹೇಳಿಕೆ ಇಲ್ಲಿಯವರೆಗೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+