ಗಗನಯಾತ್ರಿಗಳಿಗೆ 11 ತಿಂಗಳು ರಷ್ಯಾದಲ್ಲಿ ತರಬೇತಿ
ನವದೆಹಲಿ, ಜನವರಿ 16: ಭಾರತದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಾನವ ಸಹಿತ ಗಗನಯಾನಕ್ಕೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ 11 ತಿಂಗಳ ತರಬೇತಿ ದೊರೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗಗನಯಾತ್ರಿಗಳ ತರಬೇತಿ ಜನವರಿ ಮೂರನೇ ವಾರದಿಂದ ಪ್ರಾರಂಭವಾಗಲಿದೆ.
ರಷ್ಯಾದಲ್ಲಿ 11 ತಿಂಗಳು ತರಬೇತಿ ಪಡೆದ ಬಳಿಕ ಗಗನಯಾತ್ರಿಗಳು ಭಾರತದಲ್ಲಿ ನಿರ್ದಿಷ್ಟ ಹಂತದ ತರಬೇತಿ ಪಡೆಯುತ್ತಾರೆ. ಇಸ್ರೋದಿಂದ ವಿನ್ಯಾಸಗೊಳಿಸಲಾದ ಗಗನನೌಕೆಯಲ್ಲಿ ತರಬೇತಿ ನೀಡಲಾಗುತ್ತದೆ. ಅದನ್ನು ಹೇಗೆ ನಿರ್ವಹಸಿಬೇಕು ಎಂದು ಅವರಿಗೆ ಹೇಳಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುಮಾರು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಗಗನಯಾನ ಯೋಜನೆಯನ್ನು 2022ರಲ್ಲಿ ಉಡಾವಣೆ ಮಾಡಲು ಇಸ್ರೋ ಸಿದ್ಧವಾಗುತ್ತಿದೆ.












Click it and Unblock the Notifications