ದೆಹಲಿಯ ಷಕರ್ ಪುರ್ ನಲ್ಲಿ ಐವರು ಶಂಕಿತ ಉಗ್ರರ ಬಂಧನ
ನವದೆಹಲಿ, ಡಿಸೆಂಬರ್ 07: ದೆಹಲಿ ಪೊಲೀಸರ ವಿಶೇಷ ಕಾರ್ಯಪಡೆ ಎನ್ ಕೌಂಟರ್ ನಡೆಸಿ ಸೋಮವಾರ ಐವರು ಶಂಕಿತ ಉಗ್ರರನ್ನು ಬಂಧಿಸಿದೆ. ಪೂರ್ವ ದೆಹಲಿಯಲ್ಲಿನ ಷಕರ್ ಪುರ್ ನಲ್ಲಿ ಐವರನ್ನು ಬಂಧಿಸಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಬಂಧಿತರಾದ ಐವರಲ್ಲಿ ಇಬ್ಬರು ಪಂಜಾಬ್ ಮೂಲದವರಾಗಿದ್ದಾರೆ. ಇನ್ನುಳಿದ ಮೂವರು ಕಾಶ್ಮೀರದವರಾಗಿದ್ದಾರೆ.
ಐವರು ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಾಲಿಸ್ತಾನ್ ಸಂಘಟನೆಯೊಂದಿಗೆ ಇವರಿಗೆ ನಂಟು ಇರುವುದಾಗಿ ವರದಿಗಳು ತಿಳಿಸಿವೆ. ಇದೇ ಸಂದರ್ಭ ವಿಶೇಷ ಪೊಲೀಸ್ ಕಾರ್ಯಪಡೆ ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ಶಂಕಿತ ಉಗ್ರರ ಬಂಧನದ ನಂತರ ಇನ್ನಷ್ಟು ಹೆಚ್ಚಿನ ನಿಗಾ ವಹಿಸಲಾಗಿದೆ.

ನವೆಂಬರ್ ನಲ್ಲಿ ದೆಹಲಿ ಪೊಲೀಸರು ಸರೈ ಕಾಲೇಖಾನ್ ಎಂಬಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆಯ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿತ್ತು. ಇದೀಗ ಸೋಮವಾರ ಎನ್ ಕೌಂಟರ್ ನಡೆಸಿ ಮತ್ತೆ ಐವರನ್ನು ಬಂಧಿಸಲಾಗಿದೆ. ಪೂರ್ವ ದೆಹಲಿಯ ಲಕ್ಷ್ಮೀಪುರ ಹಾಗೂ ಮಯೂರ್ ವಿಹಾರ ನಡುವೆ ಇರುವ ಷಕರ್ ಪುರ್ ನಲ್ಲಿ ಈ ಬೆಳವಣಿಗೆಯಿಂದಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.












Click it and Unblock the Notifications