ಪ್ರಧಾನಿ ಕಚೇರಿ ದಾಖಲೆ ಸುರಕ್ಷಿತವಾಗಿವೆ: ಪಿಎಂಒ ಟ್ವೀಟ್
ನವದೆಹಲಿ, ಏ. 29: ಪ್ರಧಾನಿ ಕಚೇರಿಯಲ್ಲಿ ಇಂದು ಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತು. ಆದರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತವೇನೂ ಆಗಿಲ್ಲ. ಯಾವುದೇ ದಾಖಲೆ ಪತ್ರಗಳು ಹಾಳಾಗಿಲ್ಲ. ಎಲ್ಲವೂ ಸುರಕ್ಷಿತವಾಗಿವೆ ಎಂದು ಪ್ರಧಾನಿ ಕಾರ್ಯಾಲಯದ ಮಾಧ್ಯಮ ಸಲಹೆಗಾರ ಪಂಕಜ್ ಪಚೋರಿ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
For those asking- Everyone here appreciates prompt action taken by staff to control the minor fire today. No official record was damaged.
— Pankaj Pachauri (@PankajPachauri) April 29, 2014 ಹಿಂದಿನ ಸುದ್ದಿ: ದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ಪ್ರಧಾನಿ ಕಚೇರಿಗೆ ಬೆಂಕಿ ಬಿದ್ದಿದೆ. ಇಂದು ಬೆಳಗ್ಗೆ 6.30ರಲ್ಲಿ ಈ ಅಗ್ನಿದುರಂತ ಸಂಭವಿಸಿದ್ದು, 5 ಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿ ಇನ್ನೇನು 15 ದಿನಗಳಲ್ಲಿ ಮುಗಿಯಲಿದ್ದು, ಕೊನೆಯ ಘಳಿಗೆಯಲ್ಲಿ ಗರಿಷ್ಠ ಭದ್ರತೆಯ ಪ್ರಧಾನಿ ಕಚೇರಿಯಲ್ಲಿ ಹೀಗೆ ಬೆಂಕಿ ಅನಾಹುತವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications