ಸೇವಾ ಪಾವತಿ ಹೆಚ್ಚಳಕ್ಕೆ ಸರ್ಕಾರ ನಕಾರ: ಸೇನೆಯಲ್ಲಿ ಅಸಮಾಧಾನ

ನವದೆಹಲಿ, ಡಿಸೆಂಬರ್ 4: ಸುಮಾರು ಒಂದು ಲಕ್ಷ ಸಶಸ್ತ್ರ ಸಿಬ್ಬಂದಿಗೆ ಅಧಿಕ ಸೇನಾ ಸೇವಾ ಪಾವತಿ (ಎಂಎಸ್‌ಪಿ) ಹೆಚ್ಚಳ ಮಾಡಬೇಕೆಂಬ ದೀರ್ಘ ಕಾಲದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ.

ಜೂನಿಯರ್ ಕಮಿಷನಡ್ ಅಧಿಕಾರಿಗಳು (ಜೆಸಿಒ) ಸೇರಿದಂತೆ ಸುಮಾರು ಒಂದು ಲಕ್ಷ ಮಂದಿಗೆ ಎಂಎಸ್‌ಪಿ ಬೇಡಿಕೆ ಇರಿಸಲಾಗಿತ್ತು.

ಹಣಕಾಸು ಸಚಿವಾಲಯವು ಸೇನೆಯ ಬೇಡಿಕೆಯನ್ನು ತಿರಸ್ಕರಿಸಿರುವುದು ಸೇನೆಯಲ್ಲಿ ಅಸಮಾಧಾನ ಮೂಡಿಸಿದೆ. ಹೀಗಾಗಿ ಅದರ ಮರುಪರಿಶೀಲನಾ ಬೇಡಿಕೆಯನ್ನು ಪರಿಶೀಲಿಸುವುದಾಗಿ ಸಚಿವಾಲಯ ತಿಳಿಸಿದೆ.

finance ministry rejects higher military service pay for 1 lakh personnel army

87,646 ಜೆಸಿಒಗಳು ಮತ್ತು ನೌಕಾಪಡೆ ಮತ್ತು ಸೇನಾ ಪಡೆಯ 25,434 ಸೈನಿಕರು ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೆಸಿಒ ಮತ್ತು ನೌಕಾ ಪಡೆ ಹಾಗೂ ಭಾರತೀಯ ಶಸ್ತ್ರ ಪಡೆಗಳಲ್ಲಿನ ಸಮಾನಾಂತರ ಶ್ರೇಣಿಯವರಿಗೆ ಅಧಿಕ ಎಂಎಸ್‌ಪಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು.

ಪ್ರಸ್ತುತ ಎಂಎಸ್‌ಪಿ ಎರಡು ಹಂತಗಳಲ್ಲಿದ್ದು, ಒಂದು ಅಧಿಕಾರಿಗಳಿಗೆ ಹಾಗೂ ಇನ್ನೊಂದು ಜೆಸಿಒ ಮತ್ತು ಯೋಧರಿಗೆ ಮೀಸಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+