FAKE NEWS: 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಸ್ತರಣೆ?

ನವದೆಹಲಿ, ಮಾರ್ಚ್ 30: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಏಪ್ರಿಲ್ 14 ವರೆಗೂ (21 ದಿನಗಳ ಕಾಲ) ಭಾರತವನ್ನು ಲಾಕ್ ಡೌನ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಈ ಮಧ್ಯೆ ಭಾರತದಲ್ಲಿ ದಿನೇ ದಿನೇ ಕೋವಿಡ್-19 ಪಾಸಿಟೀವ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದೆ. ಸದ್ಯ ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1000 ಗಡಿ ದಾಟಿದೆ. ಡೆಡ್ಲಿ ಕೊರೊನಾದಿಂದ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ಸರ್ಕಾರ ಮತ್ತಷ್ಟು ದಿನಗಳಿಗೆ ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ.

ಲಾಕ್ ಡೌನ್ ವಿಸ್ತರಣೆ ಕುರಿತು ಕೆಲ ವರದಿಗಳು ಕೂಡ ಪ್ರಕಟವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಹಾಗಾದ್ರೆ, ಏಪ್ರಿಲ್ 14 ರ ಬಳಿಕ ಲಾಕ್ ಡೌನ್ ವಿಸ್ತರಣೆ ಆಗುತ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸುಳ್ಳು ಸುದ್ದಿ ಕಣ್ರೀ!

''ಏಪ್ರಿಲ್ 14 ರವರೆಗಿನ ಲಾಕ್ ಡೌನ್ ಅನ್ನು ಸರ್ಕಾರ ವಿಸ್ತರಣೆ ಮಾಡಬಹುದು'' ಎಂಬ ವರದಿಗಳು ಅಪ್ಪಟ ಸುಳ್ಳು ಎಂದು ಪ್ರಸಾರ ಭಾರತಿ ಸ್ಪಷ್ಟಪಡಿಸಿದೆ. ''ಲಾಕ್ ಡೌನ್ ವಿಸ್ತರಣೆ ಮಾಡುವ ಪ್ಲಾನ್ ಇಲ್ಲ'' ಎಂದು ಪ್ರಸಾರ ಭಾರತಿಗೆ ಕ್ಯಾಬಿನೆಟ್ ಸೆಕ್ರೆಟರಿ ರಾಜೀವ್ ಗೌಬಾ ತಿಳಿಸಿದ್ದಾರೆ.

ಲಾಕ್ ಡೌನ್ ಘೋಷಿಸಿದ್ದ ಮೋದಿ

ಲಾಕ್ ಡೌನ್ ಘೋಷಿಸಿದ್ದ ಮೋದಿ

ಕಳೆದ ಮಾರ್ಚ್ 22 ರಂದು ಜನತಾ ಕರ್ಫ್ಯೂ ಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 24 ರಂದು ಮೂರು ವಾರಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ್ದರು. ಏಪ್ರಿಲ್ 14 ರವರೆಗೂ ಲಾಕ್ ಡೌನ್ ಮುಂದುವರೆಯಲಿದೆ.

ಸಾರಿಗೆ ವ್ಯವಸ್ಥೆ ಇಲ್ಲ

ಸಾರಿಗೆ ವ್ಯವಸ್ಥೆ ಇಲ್ಲ

ಲಾಕ್ ಡೌನ್ ಪರಿಣಾಮ ಸಾರ್ವಜನಿಕ ಸಾರಿಗೆ ಸೇವೆ ರದ್ದುಗೊಂಡಿದೆ. ಆಹಾರ ಮತ್ತು ಔಷಧಿ ಅಂಗಡಿಗಳನ್ನು ತೆರೆಯುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು

ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು

ಇಲ್ಲಿಯವರೆಗೂ ಭಾರತದಲ್ಲಿ 1153 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 102 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 28 ಮಂದಿ ಸಾವಿಗೀಡಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+