Fake News: ಭಾರತೀಯ ಸೇನಾ ನೇಮಕ ಪ್ರಕ್ರಿಯೆ ಮುಂದೂಡಿಕೆ
ನವದೆಹಲಿ, ಆಗಸ್ಟ್ 18: ಸೇನೆಯು ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎನ್ನುವ ಮಾಧ್ಯಮಗಳ ವರದಿಯನ್ನು ಭಾರತೀಯ ಸೇನೆ ನಿರಾಕರಿಸಿದೆ.
ಈ ಬಾರಿಯ ಸೇನಾ ನೇಮಕಾತಿಯನ್ನು 2021ಕ್ಕೆ ಮುಂದೂಡಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ, ರಾಜ್ಯ ಸರ್ಕಾರಗಳ ಒಪ್ಪಿಗೆ ದೊರೆತ ಕೂಡಲೇ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಭಾರತೀಯ ಸೇನೆಯ ಕಾರ್ಯಾಚರಣೆಗಾಗಿ ಸೇನೆಯು ಮಿಲಿಟರಿ ಪೊಲೀಸ್‌ನಲ್ಲಿ 100 ಮಹಿಳೆಯರನ್ನು ಸೇರಿದಂತೆ ಇತರೆ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಏತನ್ಮಧ್ಯೆ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ನ 344 ಹುದ್ದೆಗಳಿಗೆ ಯುಪಿಎಸ್‌ಸಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 26ರ ಸಂಜೆ 6 ಗಂಟೆವರೆಗೆ ಅವಕಾಶವಿದೆ.

ಇದೀಗ ಭಾರತೀಯ ಸೇನೆಯು ಮಹಿಳೆ ಹಾಗೂ ಪುರುಷರಿಬ್ಬರನ್ನೂ ನೇಮಕ ಮಾಡಿಕೊಳ್ಳುತ್ತಿದೆ.ಶೀಘ್ರವೇ 100 ಮಹಿಳೆಯರ ನೇಮಕವೂ ನಡೆಯಲಿದೆ. ಯುಪಿಎಸ್‌ಸಿ ಆಗಸ್ಟ್ 5 ರಂದು ಪರೀಕ್ಷೆಯ ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅರ್ಜಿಯನ್ನು ಸೆಪ್ಟೆಂಬರ್ 7ರೊಳಗೆ ಹಿಂಪಡೆಯಬಹುದಾಗಿದೆ.












Click it and Unblock the Notifications