ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ

ನವದೆಹಲಿ, ಜನವರಿ 17: ಲೋಕಸಭೆ ಚುನಾವಣೆ ದಿನಾಂಕ ಕುರಿತು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಆತಂಕಗೊಂಡಿರುವ ಕೇಂದ್ರ ಚುನಾವಣಾ ಆಯೋಗ ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿದೆ.

ಸುಳ್ಳು ಸುದ್ದಿಯ ಮೂಲವನ್ನು ಪತ್ತೆ ಮಾಡುವಂತೆ ಹಾಗೂ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಚುನಾವಣೆ ಆಯೋಗವು ಸೂಚಿಸಿದೆ.

ಲೋಖಸಭೆ ಚುನಾವಣೆಯ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿ ಸುದ್ದಿಗಳು ಹರಿದಾಡುತ್ತಿವೆ. ಚುನಾವಣೆ ಆಯೋಗವೇ ದಿನಾಂಕ ನಿಗದಿ ಮಾಡಿದೆ ಎಂದು ಏಪ್ರಿಲ್ ತಿಂಗಳ ದಿನಾಂಕವೊಂದು ಹರಿದಾಡುತ್ತಿದೆ. ಇದು ಆಯೋಗದ ನಿದ್ದೆಗೆಡಿಸಿದೆ.

fake news about Lok Sabha elections: Election commission ask for investigation

ಸುಳ್ಳು ಸುದ್ದಿಯು ಹರಡದಂತೆ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗವು ದೆಹಲಿ ಪೊಲೀಸರನ್ನು ಕೇಳಿದೆ. ಸೂಕ್ತ ಕಾನೂನಿನ ಅಡಿಯಲ್ಲಿ ತಪ್ಪಿತಸ್ತರನ್ನು ಶಿಕ್ಷೆಗೆ ಗುರಿ ಪಡಿಸುವಂತೆಯೂ ಆಯೋಗ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+