ಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿ

ನವದೆಹಲಿ, ಫೆಬ್ರವರಿ 04: ಭಾರತೀಯ ವಾಯುಸೇನೆ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ್ದು ಸತ್ಯವೇ? ಹಾಗಿದ್ದರೆ ಉಪಗ್ರಹ ಚಿತ್ರ ಬಿಡುಗಡೆ ಮಾಡಿ ಎನ್ನುತ್ತಿದ್ದವರಿಗೆ ಕೊನೆಗೂ ಉತ್ತರ ನೀಡುವ ಕಾಲ ಬಂದಿದೆ.

ಮೀರಜ್ 2000 ಯುದ್ಧ ವಿಮಾನಗಳ ಮೂಲಕ ಭಾರತ ಉಗ್ರರ ನೆಲೆ ಮೇಲೆ ನಡೆಸಿದ ಬಾಂಬ್ ದಾಳಿಗೂ ಮೊದಲ ಮತ್ತು ನಂತರದ ಉಪಗ್ರಹ ಚಿತ್ರ ಜೀ ನ್ಯೂಸ್ ಗೆ ಸಿಕ್ಕಿದ್ದು, ಅದು ಚಿತ್ರನ್ನು ಪ್ರಕಟಿಸಿದೆ.

ಒಂದು ಚಿತ್ರ ಫೆಬ್ರವರಿ 23 ರಂದು, ಆಂದರೆ ದಾಳಿ ನಡೆಯುವ ಮೂರು ದಿನ ಮೊದಲು ತೆಗೆದಿದ್ದಾದರೆ, ಮತ್ತೊಂದು ಫೆಬ್ರವರಿ 26 ಅಂದರೆ ದಾಳಿ ನಡೆದ ನಂತರ ತೆಗೆದಿದ್ದು.

ಈ ಚಿತ್ರದಲ್ಲಿ ಬಾಲಕೋಟ್ ಉಗ್ರತಾಣದ ಮೇಲೆ ಬಾಂಬ್ ದಾಳಿ ನಡೆದು, ಜೈಷ್ ತಾಣ ಬಹುಪಾಲು ನಾಶವಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಇಸ್ರೇಲಿ ಬಾಂಬ್ ಮೂಲಕ ಉಗ್ರರ ಮೇಲೆ ದಾಳಿ?

ಏರ್ ಸ್ಟ್ರೈಕ್ ಗೆ ಬಳಸಿದ್ದು ಸೈಸ್ 2000 ಗ್ಲೈಡ್ ಬಾಂಬ್ ಆಗಿದ್ದು, ಇದನ್ನು ಇಸ್ರೇಲ್ ನಿಂದ ಭಾರತ ಪಡೆದುಕೊಂಡಿದೆ. 'ಶಿರಚ್ಛೇದನ' ಆಯುಧ ಎಂದೇ ಕರೆಯಲ್ಪಡುವ ಈ ಬಾಂಬ್ ಗಳು ಕಟ್ಟಡದ ಒಳಗೆ ನುಸಿಳಿ ಸ್ಫೋಟಿಸುವ ಸಾಮರ್ಥ್ಯ ಹೊಂದಿವೆ!

Array

ಕ್ಯಾಂಪಿನಲ್ಲಿದ್ದ ಯಾರೂ ಬದುಕುಳಿಯಲು ಸಾಧ್ಯವಿಲ್ಲ!

ಈ ಚಿತ್ರವನ್ನು ನೋಡಿದರೆ ಅಂದು ಕ್ಯಾಂಪಿನಲ್ಲಿದ್ದ ಯಾರೂ ಬದುಕುಳಿದಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಜೀ ನ್ಯೂಸ್ ವರದಿ ಮಾಡಿದೆ. ಇಸ್ರೇಲ್ ನ ಈ ಶಕ್ತಿಶಾಲಿ ಬಾಂಬ್ ಗಳು ಉಗ್ರನೆಲೆಯಲ್ಲಿದ್ದ ನರಪಿಳ್ಳೆಯನ್ನೂ ಉಳಿಸಿಲ್ಲ ಎನ್ನಲಾಗಿದೆ.

Array

ಪಾಕಿಸ್ತಾನದ ಸುಳ್ಳಿಗೆ ಸಾಕ್ಷಿ!

ಏರ್ ಸ್ಟ್ರೈಕ್ ನಡೆದಿದ್ದೇ ಸುಳ್ಳು, ಭಾರತ ಸುಳ್ಳು ಹೇಳುತ್ತಿದೆ ಎಂದಿದ್ದ ಪಾಕಿಸ್ತಾನಕ್ಕೆ ಈ ಚಿತ್ರ ಮುಖಭಂಗವನ್ನುಂಟು ಮಾಡಿರುವುದು ಖಂಡಿತ. ಏರ್ ಸ್ಟ್ರೈಕ್ ನಡೆದಿಲ್ಲವಾದರೆ ಫೆಬ್ರವರಿ 23 ರಂದು ಇದ್ದಂತೆ ಫೆಬ್ರವರಿ 26 ಉಗ್ರನೆಲೆ ಯಾಕಿಲ್ಲ? ಮೂರು ದಿನದಲ್ಲಿ ಆ ಪರಿ ಬದಲಾವಣೆ ಯಾಕಾಯ್ತು? ಈ ಎಲ್ಲ ಪ್ರಶ್ನೆಗಳಿಗೂ ಪಾಕಿಸ್ತಾನವೇ ಉತ್ತರಿಸಬೇಕಿದೆ.

ಮಸೂದ್ ಅಝರ್ ಸಾವು?

ಮಸೂದ್ ಅಝರ್ ಸಾವು?

ಫೆಬ್ರವರಿ 26 ರಂದು ಬಾಲಕೋಟ್ ಉಗ್ರ ನೆಲೆಯ ಮೇಲೆ ಏರ್ ಸ್ಟ್ರೈಕ್ ನಡೆಸಿದ ಭಾರತ ಸುಮಾರು 250-300 ಉಗ್ರರನ್ನು ಹೊಡೆದು ಹಾಕಿದೆ ಎನ್ನಲಾಗಿತ್ತು. ಈ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಸಹ ಸತ್ತಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪಾಕ್ ಮಾಧ್ಯಮ ಮತ್ತು ಜೈಷ್ ಸಂಘಟನೆ ಎರಡೂ ಈ ವದಂತಿಯನ್ನು ತಳ್ಳಿಹಾಕಿವೆ. ಆದರೆ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲದೆ, ಮಸೂದ್ ಸಾವನ್ನು ಮುಚ್ಚಿಡಲಾಗುತ್ತಿದೆ ಎಂಬ ಅನುಮಾನ ಸಹ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+