ಲೋಕಸಭಾ ಚುನಾವಣೆಯೊಟ್ಟಿಗೆ 7 ರಾಜ್ಯಗಳ ವಿಧಾನಸಭೆ ಚುನಾವಣೆ?

ನವದೆಹಲಿ, ಡಿಸೆಂಬರ್ 04: ಮುಂಬರುವ ಮೇ-ಜೂನ್ (2019) ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದರೊಟ್ಟಿಗೇ ಏಳು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ನಡೆಸುವ ಬಗ್ಗೆ ಚುನಾವಣಾ ಆಯೋಗ ಚಿಂತನೆ ನಡೆಸುತ್ತಿದೆ.

ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಏಳು ರಾಜ್ಯಗಳ ವಿಧಾನಸಭೆಯ ಕಾಲಾವಧಿ 2019 ರ ಮೇ-ಜೂನ್ ತಿಂಗಳಿನಲ್ಲಿ ಮುಗಿಯಲಿದೆ.

ಆದ್ದರಿಂದ ಲೋಕಸಭೆ ಚುನಾವಣೆಯೊಟ್ಟಿಗೇ ಈ ರಾಜ್ಯಗಳ ಚುನಾವಣೆಯನ್ನೂ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಷ್ಟೇ ವಿಧಾನಸಭೆಯನ್ನು ವಿಸರ್ಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಈ ರಾಜ್ಯಕ್ಕೆ ಚುನಾವಣೆ ಘೋಷಣೆಯಾಗಬಹುದು.

ಯಾವ್ಯಾವ ರಾಜ್ಯಗಳಲ್ಲಿ?

ಯಾವ್ಯಾವ ರಾಜ್ಯಗಳಲ್ಲಿ?

ಅರುಣಾಚಲ ಪ್ರದೇಶ
ಆಂಧ್ರಪ್ರದೇಶ
ಒಡಿಶಾ
ಸಿಕ್ಕಿಂ
ಮಹಾರಾಷ್ಟ್ರ
ಹರ್ಯಾಣ
ಜಾರ್ಖಂಡ್
ಜಮ್ಮು ಮತ್ತು ಕಾಶ್ಮೀರ(ಯಾವ ಕ್ಷಣದಲ್ಲಾದರೂ ಚುನಾವಣೆಯಾಗಬಹುದು)

ವಿಧಾನಸಭೆ ಕಾಲಾವಧಿ ಅಂತ್ಯವಾಗುವುದು ಯಾವಾಗ?

ವಿಧಾನಸಭೆ ಕಾಲಾವಧಿ ಅಂತ್ಯವಾಗುವುದು ಯಾವಾಗ?

ಅರುಣಾಚಲ ಪ್ರದೇಶ: 01-06-2019
ಆಂಧ್ರಪ್ರದೇಶ: 18.06.2019
ಒಡಿಶಾ: 11.06.2019
ಸಿಕ್ಕಿಂ: 27.05.2019
ಮಹಾರಾಷ್ಟ್ರ: ಸೆಪ್ಟೆಂಬರ್ 2019
ಹರ್ಯಾಣ: ಸೆಪ್ಟೆಂಬರ್ 2019
ಜಾರ್ಖಂಡ್: ನವೆಂಬರ್ 2019
ಜಮ್ಮು ಮತ್ತು ಕಾಶ್ಮೀರ: (ಈಗಾಗಲೇ ವಿಧಾನಸಭೆ ವಿಸರ್ಜನೆಯಾಗಿದೆ)

ಒಂದು ದೇಶ-ಒಂದು ಚುನಾವಣೆ!

ಒಂದು ದೇಶ-ಒಂದು ಚುನಾವಣೆ!

ಒಂದು ದೇಶ-ಒಂದು ಚುನಾವಣೆ ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯೊಟ್ಟಿಗೇ ಈ ಎಲ್ಲ ರಾಜ್ಯಗಳ ಚುನಾವಣೆಯೂ ನಡೆಯುವಂತೆ ಮಾಡುತ್ತಾರಾ? ಚುನಾವಣಾ ಆಯೋಗವೂ ಈ ಬಗ್ಗೆ ಚಿಂತನೆ ನಡೆಸುತ್ತಿದೆಯಾ ಎಂಬ ಅನುಮಾನ ಆರಂಭವಾಗಿದೆ.

ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣಾ ವಿಧಾನಸಭೆಗಳ ಕಾಲಾವಧಿ ಮುಗಿಯುವ ಮುನ್ನವೇ ಚುನಾವಣೆಯನ್ನು ಘೋಷಿಸಿ ಮೊದಲೇ ಚುನಾವಣೆ ನಡೆಸುವ ಬಗ್ಗೆ ಚಿಂತನೆ ನಡೆಸಿದರೆ ಅಚ್ಚರಿಯಿಲ್ಲ.

ಲೋಕಸಭೆಯ ಕಾಲಾವಧಿ

ಲೋಕಸಭೆಯ ಕಾಲಾವಧಿ

ಲೋಕಸಭೆಯ ಕಾಲಾವಧಿ ಮೇ ತಿಂಗಳಿನಲ್ಲಿ ಕೊನೆಯಾಗಲಿದ್ದು, ಅಷ್ಟರಲ್ಲಿ ಚುನಾವಣೆ ನಡೆಯಬೇಕಿದೆ. ಈ ವರ್ಷದ ನವೆಂಬರ್ ಡಿಸೆಂಬರ್ ನಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಯ ಸಮಯದಲ್ಲೇ ಲೋಕಸಭೆ ಚುನಾವಣೆಯೂ ನಡೆಯಬಹುದು ಎಂದು ಕೆಲವು ರಾಜಕೀಯ ಪಂಡಿತರು ನಿರೀಕ್ಷಿಸಿದ್ದರು. ಪ್ರಧಾನಿ ಮೋದಿ, ಅವಧಿಗೂ ಮುನ್ನವೇ ಲೋಕಸಭೆಯನ್ನು ವಿಸರ್ಜಿಸಬಹುದು ಎನ್ನಲಾಗಿತ್ತು. ಆದರೆ ಅಂಥ ಯಾವ ಬೆಳವಣಿಗೆಗಳೂ ಸಂಭವಿಸದೆ, ಲೋಕಸಭಾ ಚುನಾವಣೆ ಮೇ-ಜೂನ್ ತಿಂಗಳಿನಲ್ಲಿಯೇ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+