ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀತಿ ಸಂಹಿತೆ ಉಲ್ಲಂಘನೆ: ಆಜಮ್‌ ಖಾನ್‌ ಪ್ರಚಾರಕ್ಕೆ ಮತ್ತೆ ನಿಷೇಧ

|
Google Oneindia Kannada News

ನವದೆಹಲಿ, ಏಪ್ರಿಲ್ 30: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರ ಪ್ರಚಾರಕ್ಕೆ ನಿಷೇಧವನ್ನು ಚುನಾವಣಾ ಆಯೋಗ ಹೇರಿದೆ.

ಹದಿನೈದು ದಿನಗಳ ಅವಧಿಯಲ್ಲಿ ಎರಡನೇ ಬಾರಿ ಆಜಮ್ ಖಾನ್ ಅವರ ಮೇಲೆ ನಿಷೇಧ ಹೇರಲಾಗಿದ್ದು, ಈ ಬಾರಿ ನಾಳೆಯಿಂದ (ಮಾರ್ಚ್‌ 01) 48 ಗಂಟೆಗಳ ಕಾಲ ಆಜಮ್ ಖಾನ್ ಅವರು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಅಜಂ ಖಾನ್ 'ಮೊಗ್ಯಾಂಬೋ' ಎಂದ ಕೇಂದ್ರ ಸಚಿವರಿಗೆ ತೊಂದರೆ ಅಜಂ ಖಾನ್ 'ಮೊಗ್ಯಾಂಬೋ' ಎಂದ ಕೇಂದ್ರ ಸಚಿವರಿಗೆ ತೊಂದರೆ

ಕೆಲವು ದಿನಗಳ ಹಿಂದಷ್ಟೆ (ಏಪ್ರಿಲ್ 15) ರಂದು ಆಜಮ್ ಖಾನ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಕಾರಣಕ್ಕೆ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ತಡೆದಿತ್ತು.

 Election commission ban Azam Khan from campaigning

ರಾಯಪುರದಲ್ಲಿ ಅವರು ಇತ್ತೀಚೆಗೆ ಮಾಡಿದ ಚುನಾವಣಾ ಭಾಷಣದಲ್ಲಿ ಧರ್ಮ ಮತ್ತು ಜಾತೀಯ ಆಧಾರದಲ್ಲಿ ದ್ವೇಷ ಕೆರಳಿಸುವ ಮಾತುಗಳನ್ನಾಡಿದ್ದಾರೆ ಎಂದು ದೂರು ದಾಖಲಾಗಿತ್ತು, ಪರಿಶೀಲನೆ ನಡೆಸಿದ ಚುನಾವಣಾ ಆಯೋಗವು ಈ ನಿರ್ಧಾರ ತಳೆದಿದೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ನವಜೋತ್ ಸಿಂಗ್ ಸಿಧು, ಸಾಧ್ವಿ ಪ್ರಜ್ಞಾ ಸಿಂಗ್ ಇನ್ನೂ ಕೆಲವು ಪ್ರಮುಖರ ಮೇಲೆ ಚುನಾವಣಾ ಆಯೋಗವು ಪ್ರಚಾರದ ಮಾಡದಂತೆ ನಿಷೇಧ ಹೇರಿತ್ತು.

English summary
Election commission of India ban SP leader Azam Khan from campaigning for election for 48 hours for violating model code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X