Get Updates
Get notified of breaking news, exclusive insights, and must-see stories!

ನಮ್ಮ ಮೆಟ್ರೋದಲ್ಲಿ ಹಿಂದಿ ಹಾಡುಗಳ ಅಬ್ಬರ: ಪ್ರಯಾಣಿಕರಿಗೆ ಕಿರಿಕಿರಿ ನೀಡಿದ 11 ಮಂದಿ ಪರಭಾಷಿಕರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ತಡರಾತ್ರಿ ಪ್ರಯಾಣಿಕರಿಗೆ ತೊಂದರೆ ನೀಡಿ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 15ರ ತಡರಾತ್ರಿ ಸುಮಾರು 10:57 ಗಂಟೆಗೆ ಹಸಿರು ಮಾರ್ಗದ (Green Line) ಮೆಟ್ರೋ ರೈಲಿನಲ್ಲಿ ಪರಭಾಷಿಕರ ಗುಂಪು ಹಿಂದಿ ಹಾಡನ್ನು ಜೋರಾಗಿ ಹಾಡುತ್ತಾ ಕಿರಿಕಿರಿ ಮಾಡಿತ್ತು. ಈ ಮೂಲಕ ಮೆಟ್ರೋ ಪ್ರಯಾಣದ ನಿಯಮಗಳನ್ನು ಉಲ್ಲಂಘಿಸಿದ್ದ ವಿಡಿಯೋ ವೈರಲ್‌ ಆಗಿತ್ತು. ಇದರಿಂದ ಇತರೆ ಪ್ರಯಾಣಿಕರಿಗೆ ಭಾರೀ ಕಿರಿಕಿರಿಯಾಗಿತ್ತು.

ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ಹೊರಟಿದ್ದ ರೈಲಿಗೆ ಪೀಣ್ಯ ನಿಲ್ದಾಣದಲ್ಲಿ ಹತ್ತಿದ ಈ ಕಿಡಿಗೇಡಿಗಳ ಗುಂಪು, ರೈಲಿನ ಒಳಗೆ ಜೋರಾಗಿ ಹಿಂದಿ ಹಾಡುಗಳನ್ನು ಹಾಡುತ್ತಾ ಗದ್ದಲ ಎಬ್ಬಿಸಿದ್ದರು. ಇವರೆಲ್ಲರೂ ಪರಭಾಷಿಕರಾಗಿದ್ದು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಗುಂಪು ಕೇವಲ ಜೋರಾಗಿ ಹಾಡು ಹೇಳುವುದು ಮಾತ್ರವಲ್ಲದೆ, ಮೆಟ್ರೋ ರೈಲಿನ ನೆಲದ ಮೇಲೆ ಕುಳಿತು ಇತರ ಪ್ರಯಾಣಿಕರ ಓಡಾಟಕ್ಕೆ ಅಡ್ಡಿಪಡಿಸಿದ್ದರು. ಸಹ-ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದರೂ ಯಾವುದನ್ನೂ ಲೆಕ್ಕಿಸದೆ ಹಠಮಾರಿ ಧೋರಣೆ ತೋರಿದ್ದರು ಎನ್ನಲಾಗಿದೆ.

Bengaluru Namma Metro

ನೆಲದ ಮೇಲೆ ಕುಳಿತು ಜೋರಾಗಿ ಮ್ಯೂಸಿಕ್

ಮೆಟ್ರೋ ಒಳಗೆ ಶಾಂತಿ ಕದಡಿದ ಮತ್ತು ಸಾರ್ವಜನಿಕರಿಗೆ ಉಪಟಳ ನೀಡಿದ ಹಿನ್ನೆಲೆಯಲ್ಲಿ ಈಗ ಒಟ್ಟು 11 ಜನರ ಮೇಲೆ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೆಟ್ರೋ ರೈಲಿನ ಒಳಗೆ ನೆಲದ ಮೇಲೆ ಕುಳಿತುಕೊಳ್ಳುವುದು, ಜೋರಾಗಿ ಮ್ಯೂಸಿಕ್ ಹಾಕುವುದು ಅಥವಾ ಇತರರಿಗೆ ತೊಂದರೆ ಕೊಡುವುದು ಮೆಟ್ರೋ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ಹಸಿರು ಮಾರ್ಗದ ಮೆಟ್ರೋ ರೈಲಿನಲ್ಲಿ ತಡರಾತ್ರಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ ಘಟನೆ ಕೇವಲ ಗದ್ದಲಕ್ಕೆ ಸೀಮಿತವಾಗದೆ, ರೈಲಿನ ಕಾರ್ಯಾಚರಣೆಗೂ ಅಡ್ಡಿಪಡಿಸಿದ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಪೀಣ್ಯ ನಿಲ್ದಾಣದಲ್ಲಿ ರೈಲು ಹತ್ತಿದ ಈ ಗುಂಪು ಕೇವಲ ಜೋರಾಗಿ ಹಾಡು ಹೇಳುವುದು ಮಾತ್ರವಲ್ಲದೆ, ಮೆಟ್ರೋ ರೈಲಿನ ಬಾಗಿಲುಗಳು ಮುಚ್ಚದಂತೆ ತಡೆದಿದ್ದಾರೆ. ಇದರಿಂದ ರೈಲು ಮುಂದಕ್ಕೆ ಚಲಿಸಲು ತೊಂದರೆಯಾಗಿ ಕಾರ್ಯಾಚರಣೆಯಲ್ಲಿ ವ್ಯತ್ಯಯವೂ ಉಂಟಾಗಿದೆ ಎಂದು ತಿಳಿದುಬಂದಿದೆ.

ರೈಲು ಗೊರಗುಂಟೆಪಾಳ್ಯ ನಿಲ್ದಾಣದತ್ತ ಬರುತ್ತಿದ್ದಂತೆ, ಒಳಗೆ ನಡೆಯುತ್ತಿದ್ದ ಗದ್ದಲದ ಬಗ್ಗೆ ಮೆಟ್ರೋ ಸಿಬ್ಬಂದಿಗೆ ಮಾಹಿತಿ ತಲುಪಿದೆ. ಮೆಟ್ರೋ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಇವರನ್ನು ತಡೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದಲ್ಲಿ ಹಲವರನ್ನು ವಶಕ್ಕೆ ಪಡೆಯಲಾಯಿತು. ಕುವೆಂಪು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಗುಂಪಿನ ಮತ್ತಿಬ್ಬರನ್ನು ಬಂಧಿಸಲಾಯಿತು.

ಪೊಲೀಸ್ ದೂರು

ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 11 ಜನರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ತಂದಿರುವುದು ಮತ್ತು ಮೆಟ್ರೋ ರೈಲು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮೆಟ್ರೋ ರೈಲಿನ ಬಾಗಿಲಿಗೆ ಅಡ್ಡ ನಿಲ್ಲುವುದು ಅಥವಾ ಬಾಗಿಲು ಮುಚ್ಚದಂತೆ ತಡೆಯುವುದು ರೈಲು ಅಪಘಾತಗಳಿಗೆ ಕಾರಣವಾಗಬಹುದು ಮತ್ತು ಇದು ಜಾಮೀನು ರಹಿತ ಅಪರಾಧವಾಗಿ ಪರಿಣಮಿಸಬಹುದು.

ವಿಡಿಯೋದಲ್ಲಿದ್ದ ಯುವತಿಯರ ಮೇಲೆ ಕ್ರಮ ಏಕಿಲ್ಲ?

ಮೆಟ್ರೋ ರೈಲಿನಲ್ಲಿ ತಡರಾತ್ರಿ ಹಿಂದಿ ಹಾಡುಗಳನ್ನು ಹಾಡುತ್ತಾ ಗದ್ದಲ ಎಬ್ಬಿಸಿದ ಘಟನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರು ಮತ್ತು ಮೆಟ್ರೋ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ಮೆಟ್ರೋ ರೈಲಿನೊಳಗೆ ಜೋರಾಗಿ ಹಾಡು ಹೇಳುತ್ತಾ, ನೆಲದ ಮೇಲೆ ಕುಳಿತು ಅಶಿಸ್ತು ಪ್ರದರ್ಶಿಸಿದವರಲ್ಲಿ ಹೆಚ್ಚಿನವರು ಯುವತಿಯರೇ ಆಗಿದ್ದಾರೆ. ಆದರೆ, ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಬಂಧನಕ್ಕೊಳಗಾದ 11 ಮಂದಿಯೂ ಯುವಕರೇ ಆಗಿದ್ದಾರೆ.

ಈ ವಿದ್ಯಮಾನವು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಮೆಟ್ರೋ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಸ್ಪಷ್ಟವಾಗಿ ತಪ್ಪು ಮಾಡುತ್ತಿರುವುದು ಕಂಡುಬಂದರೂ ಯುವತಿಯರನ್ನು ಯಾಕೆ ಬಿಡಲಾಗಿದೆ? ಕೇವಲ ಯುವಕರನ್ನು ಮಾತ್ರ ಗುರಿಯಾಗಿಸಲಾಗಿದೆಯೇ? ಎಂಬ ಪ್ರಶ್ನೆ ಎದ್ದಿದೆ. ನಿಜವಾಗಿ ತಪ್ಪು ಮಾಡಿದವರನ್ನು ಬಿಟ್ಟು, ನಾಮಕಾವಸ್ಥೆಗೆ ಕೆಲವರನ್ನು ವಶಕ್ಕೆ ಪಡೆಯುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆಯೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೆಟ್ರೋ ಅಧಿಕಾರಿಗಳ ಇಂತಹ 'ಮೃದು ಧೋರಣೆ'ಯಿಂದಾಗಿಯೇ ಪರಭಾಷಿಕರು ಸ್ಥಳೀಯ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಕನ್ನಡಿಗರು ದೂರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+