Breaking: ಸೋನಿಯಾ, ರಾಹುಲ್‌ ಗಾಂಧಿಗೆ ಇಡಿ ನೋಟಿಸ್‌

ನವದೆಹಲಿ, ಜೂ. 1: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಕಳುಹಿಸಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರಕಾರ, ಜೂನ್ 8 ರಂದು ತನ್ನ ಮುಂದೆ ಹಾಜರಾಗುವಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ತಿಳಿಸಿದೆ. ಸೋನಿಯಾ ಗಾಂಧಿ ಅವರು ಖಚಿತವಾಗಿ ಇಡಿಗೆ ಹೋಗುತ್ತಾರೆ, ಆದರೆ ರಾಹುಲ್‌ ಗಾಂಧಿ ಈಗ ವಿದೇಶದಲ್ಲಿದ್ದಾರೆ. ಅವರು ಹಿಂದಿರುಗಿದ ಬಳಿಕ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಾರೆ. ನಿಗದಿತ ದಿನಾಂಕದಂದು ಇಲ್ಲದಿದ್ದರೆ ಅವರು ಸ್ವಲ್ಪ ಸಮಯಾವಕಾಶ ಕೇಳಬಹುದು ಎಂದು ಅವರು ಹೇಳಿದರು.

ED notices to Sonia, Rahul Gandhi

ನ್ಯಾಷನಲ್ ಹೆರಾಲ್ಡ್ ಅನ್ನು ಪ್ರತಿ ಬಾರಿ ಗುರಿಯಾಗಿಸುವ ಮೂಲಕ ಬಿಜೆಪಿಯು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ ಮತ್ತು ಅಗೌರವಿಸಿದೆ. ಏಕೆಂದರೆ ಬಿಜೆಪಿಯ ಹಿಂದಿನವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾತ್ರವನ್ನು ವಹಿಸಲಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು 1942ರಲ್ಲಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಬ್ರಿಟಿಷರು ಅದನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಇಂದು ಮೋದಿ ಸರ್ಕಾರವು ಅದೇ ಮಾಡಲು ಇಡಿಯನ್ನು ಬಳಸುತ್ತಿದೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದರು.

(ಒನ್ಇಂಡಿಯಾ ಸುದ್ದಿ)

Recommended Video

      ಹೆಚ್ಚು ಸಿಕ್ಸರ್ ಬಾರ್ಸಿರೋ ಆಟಗಾರ ಇವ್ರೆ ನೋಡಿ!! | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+