ನವದೆಹಲಿಯಲ್ಲಿ ನಡುಗಿದ ಭೂಮಿ; 4.6ರ ತೀವ್ರತೆ ದಾಖಲು

ನವದೆಹಲಿ, ಮೇ 29 : ನವದೆಹಲಿಯ ಜನರು ಶುಕ್ರವಾರ ರಾತ್ರಿ ಕೆಲವು ಕ್ಷಣಗಳ ಕಾಲ ಆತಂಕಕ್ಕೆ ಒಳಗಾದರು. ಮಳೆ ಮತ್ತು ಗಾಳಿಯ ನಡುವೆಯೇ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪದ ಅನುಭವ ಆಗಿದೆ.

ಶುಕ್ರವಾರ ರಾತ್ರಿ 9.08ರ ಸುಮಾರಿಗೆ ನವದೆಹಲಿಯಲ್ಲಿ ಭೂಮಿ ನಡುಗಿದ ಅನುಭವ ಆಗಿದೆ. ಭಯಭೀತರಾದ ಜನರು ಮನೆಯಿಂದ ಹೊರಗೆ ಬಂದರು. ರಿಕ್ಟರ್ ಮಾಪಕದಲ್ಲಿ 4.6ರ ತೀವ್ರತೆಯ ಕಂಪನ ದಾಖಲಾಗಿದೆ.

ಭೂಕಂಪದ ಕೇಂದ್ರ ಬಿಂದು ಹರ್ಯಾಣದ ರೋಟಕ್‌ನಲ್ಲಿ ದಾಖಲಾಗಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ.

Earthquake In New Delhi People Rush Out Of Home

ಹಲವಾರು ಜನರು ಭೂಮಿ ನಡುಗಿದ ಅನುಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 3.3 ಕಿ. ಮೀ. ತನಕ ಭೂಮಿ ನಡುಗಿದ ಅನುಭವ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಭೂಕಂಪದ ಕೇಂದ್ರ ಬಿಂದು ಹರ್ಯಾಣದ ರೋಟಕ್‌ ನವದೆಹಲಿಯಿಂದ 65 ಕಿ.ಮೀ. ದೂರದಲ್ಲಿದೆ. 7 ರಿಂದ 8 ಸೆಕೆಂಡ್ ತನಕ ಭೂಮಿ ಕಂಪಿಸಿದೆ ಎಂದು ಜನರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+