ಕುಡಿದ ಮತ್ತಿನಲ್ಲಿ ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟ

ನವದೆಹಲಿ, ನವೆಂಬರ್ 7: ಕುಡಿದ ಮತ್ತಿನಲ್ಲಿ ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟಿರುವ ಘಟನೆ ದಕ್ಷಿಣ ದೆಹಲಿಯ ಮದಂಗಿರ್‌ನಲ್ಲಿ ಮಂಗಳವಾರ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ವಿಡಿಯೋ ವೈರಲ್ ಆಗಿದ್ದು ಆತನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈತ 18 ವಾಹನಗಳಿಗೆ ಬೆಂಕಿ ಇಡುವ ಮುನ್ನ ಆರು ಬೈಕ್‌ಗಳ ಪೆಟ್ರೋಲ್ ಪೈಪ್‌ಗಳನ್ನು ಕತ್ತರಿಸಿದ್ದಾನೆ, ಇದರಿಂದ ಪೆಟ್ರೋಲ್ ರಸ್ತೆಯ ತುಂಬೆಲ್ಲಾ ಹರಿದಿದೆ.

ನಂತರ ಬೆಂಕಿ ಪೊಟ್ಟಣದಿಂದ ಕಡ್ಡಿ ಗೀರಿ ಬೆಂಕಿ ಹತ್ತಿಸಿದ್ದಾರೆ. ಬೈಕ್‌ಗಳು ಸೇರಿ ಅಲ್ಲೇ ಸುತ್ತಮುತ್ತ ನಿಲ್ಲಿಸಿದ್ದ ಕಾರುಗಳೂ ಕೂಡ ಬೆಂಕಿಗೆ ಆಹುತಿಯಾಗಿದೆ.

Drunken man blazed 18 vehicles in Delhi

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಅಷ್ಟರೊಳಗೆ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದೇ ರೀತಿಯ ಘಟನೆ ಬೆಳಗಾವಿಯಲ್ಲೂ ವರದಿಯಾಗಿತ್ತು.

ನಗರದಲ್ಲಿ ಎರಡೇ ದಿನದಲ್ಲಿ 10 ಕಾರುಗಳಿಗೆ ಬೆಂಕಿ ಹಚ್ಚಿ ಸುಮಾರು 1 ಕೋಟಿ ರೂ.ಗೂ ಅಧಿಕ ಹಾನಿಗೆ ಕಾರಣವಾಗಿದ್ದ ಆರೋಪಿಯನ್ನು ಸಾರ್ವಜನಿಕರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಕಾರಿಗೆ ಬೆಂಕಿ ಹಚ್ಚುತ್ತಿದ್ದ ವ್ಯಕ್ತಿ ಎಂಬಿಬಿಎಸ್, ಎಂಡಿ ಪದವಿ ಪಡೆದು ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಎನ್ನುವುದು ತಿಳಿದುಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+