ತೊಡುವ ಬಟ್ಟೆ ಅತ್ಯಾಚಾರಕ್ಕೆ ಕಾರಣವಲ್ಲ: ನಿರ್ಮಲಾ ಸೀತಾರಾಮ್

ನವದೆಹಲಿ, ಮೇ 08: "ಅತ್ಯಾಚಾರಗಳಿಗೆ ಕಾರಣ ಮಹಿಳೆಯರು ತೊಡುವ ಬಟ್ಟೆಯಲ್ಲ" ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವವ ಅತ್ಯಾಚಾರ ಪ್ರಕರಣಗಳನ್ನು ಕಟು ಶಬ್ದಗಳಿಂದ ಟೀಕಿಸಿದರು. 'ಅಕಸ್ಮಾತ್ ಅತ್ಯಾಚಾರ ನಡೆಯವುದಕ್ಕೆ ಮಹಿಳೆಯರು ತೊಡುವ ಬಟ್ಟೆಯೇ ಕಾರಣ ಎಂಬುದಾಗಿದ್ದರೆ ವೃದ್ಧೆಯರ ಮೇಲೆ ಏಕೆ ಅತ್ಯಾಚಾರ ನಡೆಯುತ್ತಿದೆ? ಶಿಶುಗಳ ಮೇಲೇಕೆ ಅತ್ಯಾಚಾರ ನಡೆಯುತ್ತಿದೆ?' ಹಲವರು ಮಹಿಳೆಯರು ತೊಡುವ ಬಟ್ಟೆಯೇ ಅತ್ಯಾಚಾರಕ್ಕೆ ಕಾರಣ ಎನ್ನುತ್ತಿದ್ದಾರೆ. ಇವೆಲ್ಲ ಅರ್ಥವಿಲ್ಲದ ಮಾತು. ನಾನು ಇದನ್ನು ಒಪ್ಪುವುದಿಲ್ಲ" ಎಂದು ಅವರು ಹೇಳಿದ್ದಾರೆ.

'ಕಾನೂನು ಮಹಿಳೆಯರಿಗೆ ಸಾಕಷ್ಟು ಭದ್ರತೆ ನೀಡುವಲ್ಲಿ ಸ್ವಪ್ರೇರಣೆಯಿಂದ ಕೆಲಸ ಮಾಡಬೇಕು. ಅತ್ಯಾಚಾರದ 10 ಘಟನೆಗಳಲ್ಲಿ 7 ಘಟನೆಗಳ ಆರೋಪಿಗಳು ಸಂತ್ರಸ್ಥೆಗೆ ಪರಿಚಿತರೇ ಆಗಿರುತ್ತಾರೆ. ಇಂಥ ಸಂದರ್ಭದಲ್ಲಿ ಕಾನೂನು ಸ್ವಪ್ರೇರಣೆಯಿಂದ ಕಾರ್ಯ ನಿರ್ವಹಿಸಿ, ಸಂತ್ರಸ್ಥೆಗೆ ನ್ಯಾಯ ನೀಡಬೇಕು' ಎಮದು ಅವರು ಹೇಳಿದರು.

Dress not reason behind rape: Nirmala Sitharaman

ಕತುವಾ, ಉನ್ನಾವೋ, ಸೂರತ್, ಗುರ್ಗಾಂವ್ , ಗುಂಟೂರು ಸೇರಿದಂತೆ ಹಲವು ಕಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಕುರಿತು ಅವರು ಕಳವಳ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+