ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದಾರೆ ವಿಡಿಯೋ

ನವದೆಹಲಿ, ಸೆಪ್ಟೆಂಬರ್ 04: ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13 ರವರೆಗೆ ಇಡಿ ವಶಕ್ಕೆ ನೀಡಲಾಗಿದೆ. ಆದರೆ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿರುವ ವಿಡಿಯೋವು ಇಡಿ ವಿಶೇಷ ನ್ಯಾಯಾಲಯದ ಆದೇಶ ಬರುವ ಕೆಲವು ಸಮಯ ಮುನ್ನ ಚಿತ್ರೀಕರಿಸಿದ್ದು.

ನ್ಯಾಯಾಲಯದ ಆವರಣದ ಕೊಠಡಿಯೊಂದರಲ್ಲಿ ಕುಳಿತಿರುವ ಡಿ.ಕೆ.ಶಿವಕುಮಾರ್ ಅವರು ತೀರಾ ಬಳಲಿದಂತೆ ವಿಡಿಯೋದಲ್ಲಿ ಕಾಣುತ್ತಿದ್ದು, 'ರಾಜಕೀಯ ದ್ವೇಷ, ಕಾನೂನಿಗಿಂತಲೂ ಗಟ್ಟಿಯಾಗಿ ಬೆಳೆದುಬಿಟ್ಟಿದೆ ಈ ದೇಶದಲ್ಲಿ' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

DK Shivakumar released a video that went viral

ರಾಜಕೀಯ ದ್ವೇಷದ ಮುಂದೆ ದೇಶದ ಕಾನೂನು ಸೋತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಡಿಕೆಶಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಕಾಣುತ್ತಿರುವಂತೆ ಡಿ.ಕೆ.ಶಿವಕುಮಾರ್ ಅವರು ಬಹಳವಾಗಿ ಬಳಲಿದಂತೆ ಕಾಣುತ್ತಿದ್ದಾರೆ. ಇದೇ ಮಾದರಿಯ ಇನ್ನೊಂದು ವಿಡಿಯೋ ಸಹ ಲೀಕ್ ಆಗಿದ್ದು, ಅದರಲ್ಲಿ ಡಿ.ಕೆ.ಶಿವಕುಮಾರ್ ಕೈಗೆ ಬ್ಯಾಂಡೇಜು ಸುತ್ತಿಕೊಂಡಿರುವುದು ಕಾಣುತ್ತದೆ.

ಡಿ.ಕೆ.ಶಿವಕುಮಾರ್ ಅವರನ್ನು ನಿನ್ನೆ ನವದೆಹಲಿಯ ಇಡಿ ಕಚೇರಿಯಲ್ಲಿಯೇ ಅಧಿಕಾರಿಗಳು ಬಂಧಿಸಿ ಇಂದು ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯವು ಡಿಕೆಶಿ ಅವರನ್ನು ಸೆಪ್ಟೆಂಬರ್ 13 ರ ವರೆಗೆ ಇಡಿ ವಶಕ್ಕೆ ನೀಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+