• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆಶಿ ವಿಚಾರಣೆ: 10 ದಿನದಲ್ಲಿ ಸಿಗದ ಉತ್ತರ 4 ದಿನದಲ್ಲಿ ಸಿಗುತ್ತಾ?

|

ನವದೆಹಲಿ, ಸೆಪ್ಟಂಬರ್ 14: ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ಶನಿವಾರ(ಸೆ.14) ಕೂಡ ಮುಂದುವರೆದಿದೆ.

ಶುಕ್ರವಾರವಷ್ಟೇ ಡಿಕೆ ಶಿವಕುಮಾರ್ ಇ.ಡಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು, ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಸೆ.17ರವರೆಗೆ ಮತ್ತೆ ಇಡಿ ಕಸ್ಟಡಿಗೆ ನೀಡಿದೆ.

ಕಳೆದ 10 ದಿನಗಳಿಂದ ಇ.ಡಿ. ವಶದಲ್ಲಿದ್ದ ಡಿಕೆ ಶಿವಕುಮಾರ್ ಅವರ ಸಂಕಷ್ಟ ಮತ್ತೆ ಮುಂದುವರಿದಿದೆ. ಶುಕ್ರವಾರ ಮಧ್ಯಾಹ್ನ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಕಾಯ್ದಿರಿಸಿತು. ಜತೆಗೆ ಅವರನ್ನು ಸೆಪ್ಟೆಂಬರ್ 17ರ ವರೆಗೆ ದಿನಗಳವರೆಗೆ ಇ.ಡಿ ವಶಕ್ಕೆ ಒಪ್ಪಿಸಿದೆ.

Breaking: ಡಿಕೆಶಿಗೆ ತಪ್ಪದ ಸಂಕಷ್ಟ: ಸೆಪ್ಟೆಂಬರ್ 17 ರವರೆಗೆ ಇಡಿ ವಶಕ್ಕೆ

ಮೊದಲಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಸೂಕ್ತ ವೈದ್ಯಕೀಯ ಸವಲತ್ತು ನೀಡಿ ಆ ನಂತರ ಅವರನ್ನು ಪ್ರಶ್ನೆ ಮಾಡಿ ಎಂದು ಇಡಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. 10 ದಿನದಲ್ಲಿ ನೀಡದಿರುವ ಉತ್ತರವನ್ನು ಡಿಕೆಶಿ 4 ದಿನದಲ್ಲಿ ಕೊಡುತ್ತಾರಾ ಎನ್ನುವುದೇ ಪ್ರಶ್ನೆಯಾಗಿದೆ.

 ಸೆಪ್ಟೆಂಬರ್ 3 ರಂದು ಡಿಕೆ ಶಿವಕುಮಾರ್ ಬಂಧನವಾಗಿತ್ತು

ಸೆಪ್ಟೆಂಬರ್ 3 ರಂದು ಡಿಕೆ ಶಿವಕುಮಾರ್ ಬಂಧನವಾಗಿತ್ತು

ಸೆಪ್ಟೆಂಬರ್ 3ರಂದು ಡಿಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದಲೂ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿದ್ದರು.ಶುಕ್ರವಾರ ಅವರ ಇ.ಡಿ ವಶದ ಅವಧಿ ಮುಕ್ತಾಯಗೊಂಡಿತ್ತು. ದೆಹಲಿಯ ನಿವಾಸದಲ್ಲಿ ಸಿಕ್ಕ ಅಕ್ರಮ ಹಣದ ಕುರಿತು ಅವರನ್ನು ಸತತ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಮತ್ತಷ್ಟು ದಿನಗಳ ಕಾಲ ವಿಚಾರಣೆಗೆ ಅವಕಾಶ ನೀಡುವಂತೆ ಇ.ಡಿ ಕೋರಿತ್ತು.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

 ಮುಂದಿನ 4 ದಿನಗಳಲ್ಲಿ ಉತ್ತರ ನೀಡಲಿದ್ದಾರೆಯೇ ಡಿಕೆಶಿ

ಮುಂದಿನ 4 ದಿನಗಳಲ್ಲಿ ಉತ್ತರ ನೀಡಲಿದ್ದಾರೆಯೇ ಡಿಕೆಶಿ

ನ್ಯಾಯಾಲಯವು ಸೆ.17ರವರೆಗೆ ಡಿಕೆ ಶಿವಕುಮಾರ್ ಅವರನ್ನು ಮತ್ತೆ ಇ.ಡಿಗೆ ನೀಡಿದ್ದು, ಈ ಐದು ದಿನಗಳಲ್ಲಿ ಇಡಿ ನಿರೀಕ್ಷಿಸಿರುವ ಉತ್ತರವನ್ನು ಡಿಕೆ ಶಿವಕುಮಾರ್ ನೀಡಲಿದ್ದಾರೆಯೇ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಈ ಪ್ರಶ್ನೆಯನ್ನು ನ್ಯಾಯಾಧೀಶರು ಕೂಡ ಕೇಳಿದ್ದರು.

 ಅನಾರೋಗ್ಯದ ಕಾರಣ ಕೊಟ್ಟರೂ ಸಿಗಲಿಲ್ಲ ಜಾಮೀನು

ಅನಾರೋಗ್ಯದ ಕಾರಣ ಕೊಟ್ಟರೂ ಸಿಗಲಿಲ್ಲ ಜಾಮೀನು

ಡಿಕೆ ಶಿವಕುಮಾರ್ ಅವರು ಅನಾರೋಗ್ಯದ ಕಾರಣ ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ತಮಗೆ ಅನಾರೋಗ್ಯ ಇರುವುದರಿಂದ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಡಿಕೆ ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ನಿನ್ನೆ 200/140 ಬಿಪಿ ಇತ್ತು. ನ್ಯಾಯಾಲಯ ಏನ ಆದೇಶ ನೀಡಿದರೂ ಅವರು ಆಸ್ಪತ್ರೆಗೆ ಹೋಗಲೇಬೇಕಾದ ಸ್ಥಿತಿ ಇದೆ ಎಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟ್‌ಗೆ ತಿಳಿಸಿದ್ದರು ಆದರೂ ಜಾಮೀನು ದೊರೆಯಲಿಲ್ಲ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

 ಡಿಕೆ ಶಿವಕುಮಾರ್ ಬಳಿ ಇದೆ 317 ಬ್ಯಾಂಕ್ ಖಾತೆ

ಡಿಕೆ ಶಿವಕುಮಾರ್ ಬಳಿ ಇದೆ 317 ಬ್ಯಾಂಕ್ ಖಾತೆ

ಡಿ.ಕೆ.ಶಿವಕುಮಾರ್ ತಮ್ಮ ಅಕ್ರಮ ಹಣವನ್ನು 317 ಖಾತೆಗಳ ಮೂಲಕ ವಿವಿದೆಡೆ ಹೂಡಿಕೆ ಮಾಡಿದ್ದಾರೆ ಎಂದು ಇಡಿ ತನಿಖೆ ಮಾಡಿದೆ. ಇಂದು ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಪ್ರಕರಣ ವಿಚಾರಣೆ ವೇಳೆ ಈ ವಿಷಯವನ್ನು ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದೆ. ಅಕ್ರಮ ಹಣವನ್ನು 317 ಬ್ಯಾಂಕ್ ಖಾತೆಗಳ ಮೂಲಕ ಡಿ.ಕೆ.ಶಿವಕುಮಾರ್ ಹಂಚಿದ್ದಾರೆ ಅಥವಾ ಹೂಡಿಕೆ ಮಾಡಿದ್ದಾರೆ ಎಂದು ಅವರು ನ್ಯಾಯಾಧೀಶರ ಗಮನಕ್ಕೆ ತಂದರು.

English summary
Former minister DK Shivakumars trial by the Enforcement Directorate was continued on Saturday (Sept. 14).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X