• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಗೆಳೆಯರಿಗೆ ಅಭಿನಂದನೆ ಹೇಳಿದ ಡಿ.ಕೆ.ಶಿವಕುಮಾರ್

|

ನವದೆಹಲಿ, ಸೆಪ್ಟೆಂಬರ್ 03: ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿದ್ದು, ಬಿಜೆಪಿಗೆ ಅಭಿನಂದನೆ ತಿಳಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ರನ್ನು ಬಂಧಿಸಿದ ಇ.ಡಿ.

'ನನ್ನನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿ ಆಗಿರುವ ಬಿಜೆಪಿಯ ಗೆಳೆಯರಿಗೆ ಅಭಿನಂದನೆಗಳು' ಎಂದು ಡಿ.ಕೆ.ಶಿವಕುಮಾರ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಐಟಿ ಮತ್ತು ಇಡಿ ನನ್ನ ವಿರುದ್ಧ ದಾಖಲಿಸಿರುವ ಪ್ರಕರಣಗಳು ರಾಜಕೀಯ ದ್ವೇಷದಿಂದ ಕುಡಿವೆ, ನಾನು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಬಲಿ ಆಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

LIVE Updates: ಸತತ ವಿಚಾರಣೆ ಬಳಿಕವೂ ಡಿಕೆಶಿ ಬಂಧನ

ನನ್ನ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಯಾರೂ ಸಹ ಹತಾಶರಾಗಬಾರದು, ನಾನು ಕಾನೂನಿಗೆ ವಿರುದ್ಧವಾದ ಯಾವ ಕೆಲಸವನ್ನೂ ಮಾಡಿಲ್ಲ. ನನಗೆ ದೇವರ ಮೇಲೆ ಹಾಗೂ ಕಾನೂನಿನ ಮೇಲೆ ಪೂರ್ಣ ನಂಬಿಕೆ ಇದೆ. ನನ್ನ ವಿರುದ್ಧ ಮಾಡಲಾಗುತ್ತಿರುವ ರಾಜಕೀಯ ಮತ್ತು ಕಾನೂನಾತ್ಮಕ ಷಡ್ಯಂತ್ರದ ವಿರುದ್ಧ ಗೆದ್ದು ಬರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

English summary
DK Shivakumar tweeted and said i congratulate BJP friends who gain success in arresting me. He said this is political Vendetta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X