• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆಶಿಗೆ ಇಲ್ಲ ಜಾಮೀನು, ಹತ್ತು ದಿನ ಇಡಿ ವಶಕ್ಕೆ

|

ನವದೆಹಲಿ, ಸೆಪ್ಟೆಂಬರ್ 03: ಕಳೆದ ಶುಕ್ರವಾರದಿಂದ ಸತತವಾಗಿ (ಭಾನುವಾರ ಹೊರತುಪಡಿಸಿ) ನವ ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ ಒಳಗಾಗಿದ್ದ ಡಿ. ಕೆ. ಶಿವಕುಮಾರ್ ಕೊನೆಗೂ ಬಂಧನಕ್ಕೆ ಒಳಗಾಗಿದ್ದಾರೆ. ಮಂಗಳವಾರ ನಡೆದ ಈ ಬೆಳವಣಿಗೆ ರಾಜ್ಯದಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿದೆ.

2017ರಲ್ಲಿ ಡಿ. ಕೆ. ಶಿವಕುಮಾರ್‌ಗೆ ಸೇರಿದ ದೆಹಲಿಯ ಪ್ಲಾಟ್‌ನಲ್ಲಿ 8.59 ಕೋಟಿ ರೂಪಾಯಿ ಹಣ ಪತ್ತೆಯಾದ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿತ್ತು.

ಡಿ. ಕೆ. ಶಿವಕುಮಾರ್ ದಿಲ್ಲಿಯಲ್ಲಿ ಬಂಧನಕ್ಕೆ ಒಳಗಾಗುತ್ತಿದ್ದಂತೆ ಸ್ವಕ್ಷೇತ್ರ ಕನಕಪುರ ಸೇರಿದಂತೆ ಬೆಂಗಳೂರು- ಮೈಸೂರು ಹೆದ್ದಾರಿ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ಬೆಂಕಿ ಹಚ್ಚುವ ಘಟನೆ ನಡೆದಿದೆ. ಅತ್ತ ದಿಲ್ಲಿಯಲ್ಲಿಯೂ ಇಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ ನಡೆದಿದೆ.

ಕರ್ನಾಟಕ ಕಾಂಗ್ರೆಸ್ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ರನ್ನು ಬಂಧಿಸಿದ ಇ.ಡಿ.

ಒಂದು ಕಡೆದ ಡಿ. ಕೆ. ಶಿವಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರು ಬಂಧನ ಖಂಡಿಸಿ ಹೇಳಿಕೆ ನೀಡುತ್ತಿದ್ದಾರೆ.

LIVE Updates: DK Shivakumar arrested

ಈ ಎಲ್ಲಾ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ.

Newest First Oldest First
7:46 PM, 4 Sep
ಪ್ರತಿದಿನವೂ ಡಿ.ಕೆ.ಶಿವಕುಮಾರ್ ಅವರನ್ನು ಅವರ ಕುಟುಂಬ ಸದಸ್ಯರು ಮತ್ತು ವಕೀಲರು ಭೇಟಿ ಮಾಡಬಹುದಾಗಿದೆ. ಈ ಅವಕಾಶವನ್ನು ಕೋರ್ಟ್ ನೀಡಿದೆ.
7:46 PM, 4 Sep
ನ್ಯಾಯಾಲಯದ ಆದೇಶದ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಮತ್ತೆ ಇಡಿ ಕಚೇರಿಗೆ ಕರೆ ತಂದಿದ್ದಾರೆ.
7:25 PM, 4 Sep
ಡಿಕೆ.ಶಿವಕುಮಾರ್ ಅವರ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ಇಡಿ ಪರ ಕೆ.ಎನ್.ನಟರಾಜ್ ವಾದ ಮಂಡಿಸಿದರು. ಮೊದಲಿಗೆ ಇಡಿಯು 14 ದಿನಗಳ ಕಾಲ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಕೇಳಿದ್ದರು. ಆದರೆ ಇದನ್ನು ನಿರಾಕರಿಸಿದ ನ್ಯಾಯಾಧೀಶರು ಇಂದಿನಿಂದ 10 ದಿನಗಳ ಕಾಲ ಇಡಿ ವಶಕ್ಕೆ ನೀಡಿದರು.
7:20 PM, 4 Sep
ಡಿ.ಕೆ.ಶಿವಕುಮಾರ್‌ ಅವರ ಜಾಮೀನು ಅರ್ಜಿ ನಿರಾಕರಣೆ ಆಗಿದ್ದು, ಅವರನ್ನು ಸೆಪ್ಟೆಂಬರ್ 13 ರ ವರೆಗೆ ಇಡಿ ವಶಕ್ಕೆ ನೀಡಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಹತ್ತು ದಿನಗಳ ಕಾಲ ದೆಹಲಿಯ ಇಡಿ ಕಚೇರಿಯಲ್ಲಿಯೇ ಇರಲಿದ್ದಾರೆ.
5:46 PM, 4 Sep
ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲವು ಕೆಲ ಸಮಯದ ನಂತರ ಆದೇಶ ಪ್ರಕಟಿಸುವುದಾಗಿ ಹೇಳಿದೆ.
4:15 PM, 4 Sep
ಡಿ.ಕೆ.ಶಿವಕುಮಾರ್ ಅವರನ್ನು ಹದಿನಾಲ್ಕು ದಿನಗಳ ಕಾಲ ವಶಕ್ಕೆ ಇಡಿಯು ಕೋರಿದೆ. 28 ಕೋಟಿ ಅಕ್ರಮ ವ್ಯವಹಾರ ನಡೆದಿರುವ ಶಂಕೆ ಇದೆ ಎಂದು ಇಡಿ ವಾದ ಮಂಡಿಸಿದೆ.
3:31 PM, 4 Sep
ಕೋರ್ಟ್‌ಗೆ ಆಗಮಿಸಿದ ಡಿಕೆ ಶಿವಕುಮಾರ್
3:03 PM, 4 Sep
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಸೇರಿದಂತೆ ಹಲವು ನಾಯಕರು ನ್ಯಾಯಾಲಯದ ಆವರಣಕ್ಕೆ ಆಗಮಿಸಿದ್ದಾರೆ.
3:02 PM, 4 Sep
ಅಭಿಷೇಕ್ ಮನು ಸಿಂಘ್ವಿ ಡಿ. ಕೆ. ಶಿವಕುಮಾರ್ ಪರವಾಗಿ ಇಂದು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ
3:02 PM, 4 Sep
ರೋಸ್ ಅವೆನ್ಯೂ ಡಿಸ್ಟ್ರಿಕ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಇಡಿ ವಿಶೇಷ ನ್ಯಾಯಾಲಯಕ್ಕೆ ಡಿ. ಕೆ. ಶಿವಕುಮಾರ್‌ರನ್ನು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ
3:01 PM, 4 Sep
ಡಿ. ಕೆ. ಶಿವಕುಮಾರ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಅಭಿಷೇಕ್ ಮನು ಸಿಂಘ್ವಿ ಅವರ ಪರವಾಗಿ ವಾದ ಮಂಡನೆ ಮಾಡಲಿದ್ದಾರೆ.
11:09 AM, 4 Sep
ಡಿ.ಕೆ. ಶಿವಕುಮಾರ್ ಆರೋಗ್ಯವಾಗಿದ್ದಾರೆ ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
9:49 AM, 4 Sep
ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಬಳಿ ಖಾಸಗಿ ಬಸ್‌ಗೆ ಕಲ್ಲು ತೂರಾಟ ನಡೆಸಲಾಗಿದೆ.
9:47 AM, 4 Sep
ಡಿ.ಕೆ. ಶಿವಕುಮಾರ್‌ಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ವರದಿಗಾಗಿ ಇಡಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.
8:59 AM, 4 Sep
"ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ, ಶಾಂತಿ ಕಾಪಾಡಿ" ಎಂದು ಕರೆ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
8:58 AM, 4 Sep
ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಭೇಟಿ. ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ
8:30 AM, 4 Sep
ಡಿಕೆ ಶಿವಕುಮಾರ್ ಬಂಧನ ಹಿನ್ನೆಲೆ ಕರ್ನಾಟಕದಾದ್ಯಂತ 15 ಬಸ್​ಗಳು ಜಖಂಗೊಂಡಿದ್ದು, 2 ಬಸ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಸ್​ ಚಾಲಕ ಹಾಗೂ ನಿರ್ವಾಹನ ಮೇಲೆ ಮೇಲೆ ಹಲ್ಲೆ ನಡೆಸಲಾಗಿದೆ.
7:54 AM, 4 Sep
ಡಿಕೆಶಿ ಬಂಧನ ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೆಲ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಕೆಶಿಯನ್ನು ತುಘಲಕ್ ಲೇನ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಮೂಲಗಳ ಪ್ರಕಾರ ಬುಧವಾರ ಮಧ್ಯಾಹ್ನ ಜನಪ್ರತಿನಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
6:51 AM, 4 Sep
ನಾನು ಹೇಡಿಯಲ್ಲ, ಎಲ್ಲವನ್ನೂ ಎದುರಿಸುತ್ತೇನೆ. ನಾನು ತಪ್ಪು ಮಾಡಿಲ್ಲ. ಮೋಸ ಮಾಡಿಲ್ಲ ಬಿಜೆಪಿ ಈಗ ಗೆಲುವು ಸಾಧಿಸಿದೆ. ಅವರಿಗೆ ಶುಭವಾಗಲಿ ಎಂದು ಬಂಧನದ ಸಮಯದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
6:50 AM, 4 Sep
ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆಯಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಆಶ್ರಯ, ಆತಿಥ್ಯ ನೀಡಿದ್ದೇ ಮುಳುವಾಯಿತು ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಡಿಕೆಶಿ ಬಂಧವನ್ನು ಖಂಡಿಸಿದ್ದಾರೆ.
12:59 AM, 4 Sep
ಶೇ.100ರಷ್ಟು ರಾಜಕೀಯ
ಡಿ. ಕೆ. ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಇದು ಶೇ. 100ರಷ್ಟು ರಾಜಕೀಯ ಎಂದಿದ್ದಾರೆ. "ಬಿಜೆಪಿ ಕಳೆದ ಐದು ವರ್ಷಗಳಿಂದ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ," ಎಂದು ಆರೋಪಿಸಿದರು.
12:55 AM, 4 Sep
ಬೆಂಗಳೂರು ಇಡಿ ಕಚೇರಿಗೆ ಭದ್ರತೆ
ದಿಲ್ಲಿ ಹಾಗೂ ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಬೆಂಬಲಿಗರ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಇಡಿ ಪ್ರಾದೇಶಿಕ ಕಚೇರಿಗೆ ನಡುರಾತ್ರಿಯೇ ಭದ್ರತೆ ಒದಗಿಸಲಾಗಿದೆ.
12:54 AM, 4 Sep
ಆಸ್ಪತ್ರೆಯಲ್ಲಿ ಡಿಕೆಎಸ್‌
ಇಡಿ ಕಚೇರಿಯಿಂದ ಬಂಧನ ಪ್ರಕ್ರಿಯೆ ಮುಗಿಸಿದ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗಾಗಿ ಡಿ. ಕೆ. ಶಿವಕುಮಾರ್‌ರನ್ನು ಆರ್‌ಎಂಎಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಆರೋಗ್ಯ ಸುಧಾರಣೆಗಾಗಿ ವೈದ್ಯರು ಉಳಿಸಿಕೊಂಡಿದ್ದಾರೆ.
12:11 AM, 4 Sep
ರಾಮನಗರದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಬಸ್ಸಿಗೆ ಬೆಂಕಿ ಹಚ್ಚಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.
12:09 AM, 4 Sep
ಡಿ.ಕೆ.ಶಿವಕುಮಾರ್ ಬಂಧನದ ವೇಳೆ ಇಡಿ ಕಚೇರಿ ಮುಂದೆ ನಡೆದ ಹೈಡ್ರಾಮಾ ಸಂದರ್ಭದಲ್ಲಿ ಇಡಿ ಅವರ ಕಾರಿಗೆ ಹಾನಿ ಆಗಿದೆ. ಡಿ.ಕೆ.ಶಿವಕುಮಾರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವ ಸಂದರ್ಭದಲ್ಲಿ ಕಾರಿನ ಮುಂಭಾಗ ಪೆಟ್ಟಾಗಿದೆ.
12:08 AM, 4 Sep
ಡಿಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ರಾಮನಗರದಲ್ಲಿ ಕೆಲವರು ಸರ್ಕಾರಿ ಬಸ್‌ಗೆ ಬೆಂಕಿ ಇಟ್ಟಿದ್ದಾರೆ.
11:52 PM, 3 Sep
ರಾಜಕೀಯವಾಗಿ ಎದುರಾಳಿಯನ್ನು ಎದುರಿಸಬೇಕೆ ಹೊರತು. ಹೀಗೆ ಕ್ರೂರವಾದ ರಾಜಕೀಯ ನಿರ್ಧಾರಗಳನ್ನು ತೆಗೆಗದುಕೊಳ್ಳಬಾರದು. ಬಿಜೆಪಿಯು ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ನ ನಾಯಕರು ನಾವು ಅವರ ಬೆನ್ನ ಹಿಂದೆ ಇದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
10:57 PM, 3 Sep
ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಕನಕಪುರದಲ್ಲಿ ಬಿಜೆಪಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೋಲಿಸರು ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಿದರು. ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
9:59 PM, 3 Sep
ಡಿ.ಕೆ.ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಬಂದ್‌ಗೆ ರಾಮನಗರ ಜಿಲ್ಲಾ ಕಾಂಗ್ರೆಸ್ ಕರೆ ನೀಡಿದೆ.
9:48 PM, 3 Sep
ಇಂದು ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಅಥವಾ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಇಂದು ಇಡಿ ಕಚೇರಿಯ ಕೊಠಡಿಯಲ್ಲಿಯೇ ಇರಿಸಿಕೊಳ್ಳಲಾಗುತ್ತದೆ. ನಾಳೆ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಲಾಗುತ್ತದೆ.
READ MORE

English summary
DK Shivakumar arrested by Enforcment Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X