ಟ್ವಿಟ್ಟರ್ ಎಫೆಕ್ಟ್: ದಿಗ್ವಿಜಯ್ ರಿಂದ ಮದುವೆ ಘೋಷಣೆ

ಬೆಂಗಳೂರು, ಏ.30: ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ ಬಿಸಿ ಕೊನೆಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ತಟ್ಟಿದೆ. ಟಿವಿ ನಿರೂಪಕಿಯೊಬ್ಬರ ಜತೆ ದಿಗ್ವಿಜಯ್ ಸಿಂಗ್ ಅವರಿದ್ದ ಚಿತ್ರ ಟ್ವಿಟ್ಟರ್ ನಲ್ಲಿ ಹರಿದಾಟಿತ್ತು. ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ದಿಗ್ವಿಜಯ್ ಸಿಂಗ್ ಅವರು ಅಮೃತಾ ಜತೆ ನನಗೆ ಸಂಬಂಧವಿರುವುದು ನಿಜ, ಇಬ್ಬರು ಶೀಘ್ರದಲ್ಲೇ ಮದುವೆಯಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

40 ಪ್ಲಸ್ ವಯಸ್ಸಿನ ಟಿ.ವಿ ನಿರೂಪಕಿ ಅಮೃತಾ ರೈ ಜೊತೆ ಕಾಂಗ್ರೆಸ್ ಮುಖಂಡ 67 ವರ್ಷದ ದಿಗ್ವಿಜಯ್ ಸಿಂಗ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಎದ್ದಿದ್ದ ಊಹಾಪೋಹಕ್ಕೆ ಟ್ವೀಟ್ ಮೂಲಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ ಆಂಕರ್ ಅಮೃತ ರೈ ಜೊತೆ ನಾನು ಸಂಬಂಧ ಹೊಂದಿರುವುದು ನಿಜ. ಶೀಘ್ರವೇ ನಾವಿಬ್ಬರೂ ಮದುವೆ ಆಗುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ಧಾರೆ.

ರಾಜ್ಯಸಭಾ ಟಿವಿಯ ಹಿರಿಯ ನಿರೂಪಕಿಯಾಗಿರುವ ಅಮೃತಾ ರೈ ಅವರು ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿ, ಟ್ವೀಟ್ ಮಾಡಿದ್ದಾರೆ ಮತ್ತು ನಾನು ನನ್ನ ಪತಿ ಇಬ್ಬರೂ ಒಪ್ಪಿಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ ಮಂದಿದ್ದಾರೆ.

ಅಮೃತ ರೈ ಸಹ ದಿಗ್ವಿಜಯ್ ಸಿಂಗ್ ಜೊತೆಗಿನ ಸಂಬಂಧದ ಕುರಿತು ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಸ್ಪಷ್ಟನೆ ನೀಡಿದ್ದು, ಶೀಘ್ರ ಮದುವೆ ಆಗುವುದಾಗಿ ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ ಪತ್ನಿ ಆಶಾ ಸಿಂಗ್ ಕ್ಯಾನ್ಸರ್ ನಿಂದಾಗಿ ಕಳೆದ ಫೆಬ್ರವರಿಯಲ್ಲಿ ಸಾವನ್ನಪ್ಪಿದ್ದರು. ದಿಗ್ವಿಜಯ್ ಹಾಗೂ ಅಮೃತಾ ಅವರ ಟ್ವೀಟ್ಸ್ ನೋಡಿ....

ದಿಗ್ವಿಜಯ್ ರಿಂದ ಮದುವೆ ಘೋಷಣೆ

ದಿಗ್ವಿಜಯ್ ರಿಂದ ಮದುವೆ ಘೋಷಣೆ

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ ಬಿಸಿ ಕೊನೆಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ತಟ್ಟಿದೆ. ಟಿವಿ ನಿರೂಪಕಿಯೊಬ್ಬರ ಜತೆ ದಿಗ್ವಿಜಯ್ ಸಿಂಗ್ ಅವರಿದ್ದ ಚಿತ್ರ ಟ್ವಿಟ್ಟರ್ ನಲ್ಲಿ ಹರಿದಾಟಿತ್ತು. ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ದಿಗ್ವಿಜಯ್ ಸಿಂಗ್ ಅವರು ಅಮೃತಾ ಜತೆ ನನಗೆ ಸಂಬಂಧವಿರುವುದು ನಿಜ, ಇಬ್ಬರು ಶೀಘ್ರದಲ್ಲೇ ಮದುವೆಯಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

ದಿಗ್ವಿಜಯ್ ಸಿಂಗ್ ರಿಂದ ಟ್ವೀಟ್

ಅಮೃತಾ ರೈ ಜತೆ ಸಂಬಂಧವಿದೆ ಎನ್ನಲು ನನಗೇನೂ ಮುಜುಗರವಿಲ್ಲ

ಸಾರ್ವಜನಿಕರಿಂದ ಟ್ವೀಟ್ ಗೆ ಪ್ರತಿಕ್ರಿಯೆ

ಅಮೃತಾ ರೈ ಹಾಗೂ ದಿಗ್ವಿಜಯ್ ಸಿಂಗ್ ಅವರ ಸಂಬಂಧ ಬಗ್ಗೆ ಸಾರ್ವಜನಿಕರ ಟ್ವೀಟ್

ನನ್ನ ಕಂಪ್ಯೂಟರ್ ಹ್ಯಾಕ್ ಆಗಿದೆ : ಅಮೃತಾ

ನನ್ನ ಕಂಪ್ಯೂಟರ್ ಹ್ಯಾಕ್ ಆಗಿದೆ ಖಾಸಗಿ ವಿಷಯಗಳು ಬಹಿರಂಗವಾಗಿದೆ ಎಂದ ಅಮೃತಾ ರೈ

ನಾನು ಈಗ ಹೊಸ ಸಂಬಂಧಕ್ಕೆ ಮುಕ್ತ

ನಾನು ಈಗ ಹೊಸ ಸಂಬಂಧಕ್ಕೆ ಮುಕ್ತಳಾಗಿದ್ದೇನೆ. ಪತಿಯಿಂದ ವಿಚ್ಛೇದನ ಪಡೆಯುತ್ತಿದ್ದೇನೆ.

ಖಾಸಗಿ ಬದುಕಿನ ಜಾಗ ಕಬಳಿಸಬೇಡಿ

ಖಾಸಗಿ ಬದುಕಿನ ಜಾಗ ಕಬಳಿಸಬೇಡಿ ಎಂದು ದಿಗ್ವಿಜಯ್ ಸಿಂಗ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+