ಡಿಜಿಟಲ್ ಲಾಕರ್‌ಗೂ ಬಂತು ಆಧಾರ್ ಕಾರ್ಡ್ ಲಾಗಿನ್
ನವದೆಹಲಿ, ಫೆ. 12: ಪ್ರಧಾನಿ ನರೇಂದ್ರ ಮೋದಿ 'ಡಿಜಿಟಲ್ ಇಂಡಿಯಾ' ಭರವಸೆಯನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಫಾರ್ಮೇಶನ್ ಟೆಕ್ನಾಲಜಿ ವತಿಯಿಂದ 'ಡಿಜಿಟಲ್ ಲಾಕರ್'ನ ಬೀಟಾ ಆವೃತ್ತಿಯನ್ನು ಜಾರಿಗೆ ತರಲಾಗಿದೆ.
ಈ ಡಿಜಿಟಲ್ ಲಾಕರ್ ಉಪಯೋಗಿಸಿಕೊಂಡು ಜನರು ತಮ್ಮ ಪ್ರಮಾಣಪತ್ರಗಳನ್ನು ಆನ್ ಲೈನ್‌ನಲ್ಲಿ ಡಿಜಿಟಲ್ ಸ್ವರೂಪದಲ್ಲಿ ಇರಿಸಿಕೊಳ್ಳಬಹುದು. ನಂತರ ತಮ್ಮ ಆಧಾರ್ ಸಂಖ್ಯೆಯ ಮೂಲಕ ಎಲ್ಲಿಯೇ ಆದರೂ ಉಪಯೋಗಿಸಿಕೊಳ್ಳಬಹುದು. ಇದಕ್ಕಾಗಿ ಜನರು ಇದರ ವೆಬ್ ಸೈಟ್‌ನಲ್ಲಿ ತಮ್ಮ ಆಧಾರ್ ಕಾರ್ಡ್ ಅಥವಾ ಯೂನಿಕ್ ಐಡೆಂಟಿಫಿಕೇಶನ್ (ಯುಐಡಿ) ಸಂಖ್ಯೆ ಉಪಯೋಗಿಸಿ ಲಾಗಿನ್ ಅಕೌಂಟ್ ಸೃಷ್ಟಿಸಿಕೊಳ್ಳಬಹುದು. [ಮೊಬೈಲ್ ಒನ್ ಅರ್ಪಣೆ]

ಜನರು ಈ ಸೌಲಭ್ಯದ ಕುರಿತು myGov.in ವೆಬ್‌ಸೈಟ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಈ ಡಿಜಿಟಲ್ ಯೋಜನೆಯಡಿ ಜನರು ತಮ್ಮ ಶಿಕ್ಷಣ, ವೈದ್ಯಕೀಯ, ಪಾಸ್ ಪೋರ್ಟ್ ಹಾಗೂ ಪ್ಯಾನ್ ಕಾರ್ಡ್ ವಿವರಗಳನ್ನು ಡಿಜಿಟಲ್ ಸ್ವರೂಪದಲ್ಲಿ ಇರಿಸಿಕೊಳ್ಳಬಹುದು. ಲಾಕರ್ ಸಿಸ್ಟಮ್‌ನ ಬೀಟಾ ಆವೃತ್ತಿಯನ್ನು ಮಹಾರಾಷ್ಟ್ರ ಸರ್ಕಾರ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಕಂಪನಿ ನಿರ್ವಹಿಸಲಿವೆ. [ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?]
ಬಿಜೆಪಿ ಚುನಾವಣೆ ಪೂರ್ವದಲ್ಲಿ ಆಧಾರ್ ಯೋಜನೆಯನ್ನು ಟೀಕಿಸಿದ್ದರೂ ನಂತರ ಅದರ ಮಹತ್ವ ಅರಿತಿದೆ. ಪ್ರತಿ ಯೋಜನೆಗೂ ಆಧಾರ್ ಕಾರ್ಡ್ ಸಂಖ್ಯೆ ಬಳಕೆಗೆ ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಆಧಾರ್ ಕಾರ್ಡ್‌ನ ಪ್ರಾಮುಖ್ಯತೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ.












Click it and Unblock the Notifications