50 ದಿನದ ಬಳಿಕ ದೆಹಲಿಯಲ್ಲಿ ಮೊದಲ ಸಲ ಕಡಿಮೆ ಕೇಸ್ ವರದಿ
ದೆಹಲಿ, ಜುಲೈ 20: ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೂರನೇ ಸ್ಥಾನದಲ್ಲಿದೆ. 1.2 ಲಕ್ಷಕ್ಕೂ ಅಧಿಕ ಕೇಸ್‌ಗಳನ್ನು ಹೊಂದಿರುವ ದೆಹಲಿಯಲ್ಲಿ ಪ್ರತಿದಿನವೂ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿತ್ತು.
ಸುಮಾರು 50 ದಿನದ ಬಳಿಕ ಮೊದಲ ಸಲ ಒಂದು ಸಾವಿರಕ್ಕಿಂತ ಕಡಿಮೆ ಸೋಂಕು ವರದಿಯಾಗಿದೆ. ದೆಹಲಿಯಲ್ಲಿಂದು 954 ಮಂದಿಗೆ ಕೊವಿಡ್ ಸೋಂಕು ದೃಢವಾಗಿದೆ. ಇಂದಿನ ವರದಿ ಬಳಿಕ ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,23,747ಕ್ಕೆ ಏರಿಕೆಯಾಗಿದೆ.
ಮೇ 27 ರಂದು ಕೊನೆಯದಾಗಿ ದೆಹಲಿಯಲ್ಲಿ ಸಾವಿರಕ್ಕಿಂತ ಕಡಿಮೆ ಸೋಂಕು ವರದಿಯಾಗಿತ್ತು. ಅದಾದ ಬಳಿಕ ದೈನಂದಿನ ಪ್ರಮಾಣ ಗರಿಷ್ಠ 3 ಸಾವಿರವರೆಗೂ ಏರಿಕೆಯಾಗಿದೆ. ಸುಮಾರು 50 ದಿನದ ಬಳಿಕ ಇದೇ ಮೊದಲ ಸಲ ಸಾವಿರಕ್ಕಿಂತ ಕಡಿಮೆ ಸೋಂಕು ದೆಹಲಿಯಲ್ಲಿ ದಾಖಲಾಗಿದೆ.
954 new #COVID19 positive cases, 1784 recovered/discharged/migrated & 35 deaths reported in Delhi today. The total number of positive cases now rises to 1,23,747 including 1,04,918 recovered/discharged/migrated and 3,663 deaths: Government of Delhi pic.twitter.com/i9fmgHLWFz
— ANI (@ANI) July 20, 2020
ಇತ್ತೀಚಿಗಷ್ಟೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಈ ಕುರಿತು ಮಾತನಾಡಿದ್ದರು. ದೆಹಲಿಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ಹೇಳಿದ್ದರು.

ಕಳೆದ ಐದು ದಿನಗಳ ವರದಿ ನೋಡುವುದಾರೇ ಜುಲೈ 19 ರಂದು 1211 ಕೇಸ್, ಜುಲೈ 18 ರಂದು 1475 ಕೇಸ್, ಜುಲೈ 17 ರಂದು 1462 ಕೇಸ್, ಜುಲೈ 16 ರಂದು 1652 ಕೇಸ್ ಹಾಗೂ ಜುಲೈ 15 ರಂದು 1647 ಜನರಿಗೆ ಸೋಂಕು ತಗುಲಿತ್ತು.
ದೆಹಲಿಯ ಒಟ್ಟು ಸೋಂಕಿತರ ಪೈಕಿ 1,04,918 ಜನರು ಗುಣಮುಖರಾಗಿದ್ದಾರೆ. ಸುಮಾರು 16 ಸಾವಿರ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೆಹಲಿಯಲ್ಲಿ 3,663 ಜನರು ಮೃತಪಟ್ಟಿದ್ದಾರೆ.












Click it and Unblock the Notifications