• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಮತ್ತೆ ಏರುಗತಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು

|

ನವದೆಹಲಿ, ನವೆಂಬರ್ 09: ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡಿದೆ.

ಒಂದೇ ದಿನ 7745 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಗರದಲ್ಲಿ ಕೊರೊನಾ ಸೋಂಕು ಆರಂಭಿಕ ದಿನಗಳಲ್ಲೂ ಕಂಡುಬರದಷ್ಟು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

24 ಗಂಟೆಯಲ್ಲಿ ಭಾರತದಲ್ಲಿ 45,674 ಹೊಸ ಕೋವಿಡ್ ಪ್ರಕರಣ

ಎರಡನೇ ಬಾರಿ ಏಳು ಸಾವಿರದ ಗಡಿ ದಾಟಿದೆ. ನವೆಂಬರ್ 6 ರಂದು 7148 ಕೊರೊನಾ ಸೋಮಕಿತರು ಪತ್ತೆಯಾಗಿದ್ದರು. ಎನ್‌ಸಿಡಿಸಿ ಅಕ್ಟೋಬರ್ 8 ರಂದು ನೀಡಿರುವ ಮಾಹಿತಿ ಪ್ರಕಾರ ಚಳಿಗಾಲದಲ್ಲಿ ದೆಹಲಿಯಲ್ಲಿ ನಿತ್ಯ ಕನಿಷ್ಠ 15 ಸಾವಿರ ಪ್ರಕರಣಗಳು ಪತ್ತೆಯಾಗಲಿವೆ.

ಇದೀಗ ಒಟ್ಟು 4,38,529 ಕೊರೊನಾ ಸೋಂಕಿತರಿದ್ದಾರೆ. ಕಳೆದ 24 ಗಂಟೆಯಲ್ಲಿ 79 ಮಂದಿ ಸಾವನ್ನಪ್ಪಿದ್ದಾರೆ.ಇದುವರೆಗೆ ಒಟ್ಟು 6989 ಮಂದಿ ಮೃತಪಟ್ಟಿದ್ದು, 3,89,683 ಮಂದಿ ಗುಣಮುಖರಾಗಿದ್ದಾರೆ.

ನವೆಂಬರ್ 2ರ ವರೆಗೆ ಕೊರೊನಾ ಸೋಂಕಿತ ಪ್ರಮಾಣ ಕಡಿಮೆ ಇತ್ತು. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕೂಡ ಕೆಟ್ಟದಾಗಿದ್ದು, ಉಸಿರಾಟದ ಸಮಸ್ಯೆಗಳು ಕಾಡುತ್ತಿವೆ.

   Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

   ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ವಿಶ್ವದಾದ್ಯಂತ 50,010,400 ಪ್ರಕರಣಗಳಿವೆ. 1,251,980 ಮಂದಿ ಮೃತಪಟ್ಟಿದ್ದಾರೆ.

   English summary
   The national capital reported 7,745 coronavirus cases in the last 24 hours - the highest number of cases since the pandemic reached the city earlier this year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X