3 ತಿಂಗಳಿಂದೀಚೆಗೆ ಅತಿ ಕಡಿಮೆ ಕೊರೊನಾ ಸೋಂಕಿತರ ಸಾವು ಕಂಡ ದೆಹಲಿ

ನವದೆಹಲಿ, ಡಿಸೆಂಬರ್ 23: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.

ಇಂದು 871 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 18 ಮಂದಿ ಮೃತಪಟ್ಟಿದ್ದು, ಕಳೆದ 3 ತಿಂಗಳಲ್ಲಿ ಮೃತಪಟ್ಟಿರುವವರಲ್ಲಿ ಕನಿಷ್ಠ ಸಂಖ್ಯೆ ಇದಾಗಿದೆ. ಸೆಪ್ಟೆಂಬರ್ 8 ರಂದು19 ಮಂದಿ ಮೃತಪಟ್ಟಿದ್ದರು.

ನಿತ್ಯ ಪಾಸಿಟಿವಿಟಿ ಪ್ರಮಾಣ .99ರಷ್ಟಿದೆ. ಇದು ಶೇ. 1.5 ಕ್ಕಿಂತ ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ 87,861 ಪರೀಕ್ಷೆ ನಡೆಸಲಾಗಿದೆ. 42,000ದಷ್ಟು ರಾಪಿಡ್ ಅಂಟಿಜನ್ ಪರೀಕ್ಷೆ ಪರೀಕ್ಷೆ ನಡೆಸಲಾಗಿದೆ. 45,816ರಷ್ಟು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.

 Delhi Records 871 Coronavirus Cases, Lowest Death Figures In 3 Months

ಭಾರತದಲ್ಲಿ 24 ಗಂಟೆಗಳಲ್ಲಿ 23,950 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,00,99,066ಕ್ಕೆ ತಲುಪಿದೆ. ಒಂದೇ ದಿನ 333 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಜತೆಗೆ 26,895 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,46,444ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಟ್ಟು ಚೇತರಿಕೆ 96,63,382ಕ್ಕೆ ತಲುಪಿದೆ. ಖಚಿತಗೊಂಡ ಪ್ರಕರಣಗಳ ಪೈಕಿ 2,89,240 ಸಕ್ರಿಯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಡಿಸೆಂಬರ್ 22ರವರೆಗೂ ದೇಶದಾದ್ಯಂತ ಒಟ್ಟು 16,42,68,721 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ 10,98,164 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+