ದೆಹಲಿಯಲ್ಲಿ ಭಾರಿ ಮಳೆ, ನೀರಿನಲ್ಲಿ ಮುಳುಗಿದ ಬಸ್, ಶವ ಪತ್ತೆ

ನವದೆಹಲಿ, ಜುಲೈ 19: ದೆಹಲಿಯಲ್ಲಿ ಭಾನುವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ತತ್ತರಗೊಂಡಿದೆ. ಮಿಂಟೋ ಸೇತುವೆ ಬಳಿ ನೀರಿನಲ್ಲಿ ಬಸ್ ಮುಳುಗಿರುವ ದೃಶ್ಯ ಕಂಡು ಬಂದಿದೆ. ವೃದ್ಧರೊಬ್ಬರ ಶವ ಪತ್ತೆಯಾಗಿದೆ.

Recommended Video

      Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

      ದೆಹಲಿಯ ಮಿಂಟೋ ಸೇತುವೆ ಬಳಿ ದೆಹಲಿ ಸಾರಿಗೆ ಸಂಸ್ಥೆ ಬಸ್(ಡಿಟಿಸಿ) ನೀರಿನಲ್ಲಿ ಮುಳುಗಿರುವ ವಿಡಿಯೋವೊಂದನ್ನು ಎಎನ್ಐ ಹಂಚಿಕೊಂಡಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳಕ್ಕೆ ಆಗಮಿಸಿ, ಬಸ್ ನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಈ ನಡುವೆ ಸೇತುವೆ ಬಳಿಯೇ ಮೃತ ದೇಹವೊಂದು ಪತ್ತೆಯಾಗಿದೆ.

      Delhi rains: Heavy showers lash city, man dies of drowning under waterlogged Minto Bridge

      ಈ ಭಾಗದಲ್ಲಿ ಛೋಟಾ ಹಾಥಿ ಎಂದು ಕರೆಯಲ್ಪಡುವ ಟಾಟಾ ಏಸ್ ವಾಹನವನ್ನು ಚಲಾಯಿಸುತ್ತಿದ್ದ 60 ವರ್ಷ ವಯಸ್ಸಿನ ವ್ಯಕ್ತಿಯ ಶವ ಎಂದು ಗುರುತಿಸಲಾಗಿದೆ. ಅಂಡರ್ ಪಾಸ್ ನಲ್ಲಿ ನೀರು ತುಂಬಿದ್ದರೂ ಕನಕ್ಟ್ ಪ್ಲೇಸ್ ಕಡೆಗೆ ವಾಹನ ಚಲಾಯಿಸಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ದೇಹದ ಮೇಲೆ ಯಾವುದೆ ಬೇರೆ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

      ಡಿಟಿಎಸ್ ಬಸ್ ಅಲ್ಲದೆ ಟೆಂಪೋವೊಂದು ಮಿಂಟೋ ಸೇತುವೆ ಬಳಿ ಮುಳುಗಿದೆ. ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

      ಹವಾಮಾನ ಮುನ್ಸೂಚನೆ: ದೆಹಲಿ -ಎನ್ ಸಿ ಆರ್ ಪ್ರದೇಶ, ನೋಯ್ಡಾ, ಗುರ್ ಗಾಂವ್, ಹಿಸಾರ್, ಜಿಂದ್, ಗೊಹಾನಾ, ಗನ್ನೌರ್, ಪಾಣಿಪಟ್, ರೊಹ್ಟಕ್, ಭಿವಾಂಡಿ, ಝಾಝಾರ್, ಸೋನಿಪಟ್, ಬಾಗ್ ಪೇಟ್, ಬುಲಂದ್ ಶೇ, ಗಾಜಿಯಾಬಾದ್, ಫಾರಿದಾಬಾದ್, ನುಹಾ, ಸೀತಾಪುರ್, ಗೋರಖ್ ಪುರ್, ಲಕ್ನೋ ಸೇರಿದಂತೆ ಹಲವು ಪ್ರದೇಶಗಳಲ್ಲಿಗುಡುಗು ಮಳೆ ನಿರೀಕ್ಷಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+