ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇತನ ನೀಡಲು ದುಡ್ಡಿಲ್ಲ, 5000 ಕೋಟಿ ಅನುದಾನಕ್ಕೆ ದೆಹಲಿ ಮನವಿ

|
Google Oneindia Kannada News

ದೆಹಲಿ, ಮೇ 31: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಎರಡ್ಮೂರು ತಿಂಗಳ ಸುದೀರ್ಘ ಲಾಕ್‌ಡೌನ್‌ನಿಂದ ಬಹುತೇಕ ಎಲ್ಲ ರಾಜ್ಯಗಳು ತೊಂದರೆಗೆ ಸಿಲುಕಿದೆ.

Recommended Video

ಫ್ಲೈಟ್ ಹತ್ತಿ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ | 5 year old reunited with Mom

ಇದೀಗ, ದೆಹಲಿ ಸರ್ಕಾರದ ಬಳಿಕ ವೇತನ ನೀಡಲು ದುಡ್ಡಿಲ್ಲ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭಾನುವಾರ ಹೇಳಿಕೊಂಡಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, 5000 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆಗೆ ಚಿಂತನೆ!ಕೇಂದ್ರದಿಂದ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆಗೆ ಚಿಂತನೆ!

ದೆಹಲಿಯ ಆರ್ಥಿಕ ಸಚಿವರು ಆಗಿರುವ ಮನೀಶ್ ಸಿಸೋಡಿಯಾ ಕೇಂದ್ರ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿದ್ದು, ''ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ರಾಜ್ಯಗಳಿಗೆ ಮಂಜೂರು ಮಾಡಿದ ಹಣವನ್ನು ದೆಹಲಿ ಸ್ವೀಕರಿಸಿಲ್ಲ'' ಎಂದು ಹೇಳಿದ್ದಾರೆ. ಮುಂದೆ ಓದಿ...

ಸರ್ಕಾರದ ಬಳಿ 1735 ಕೋಟಿ ಇದೆ

ಸರ್ಕಾರದ ಬಳಿ 1735 ಕೋಟಿ ಇದೆ

''ಸರ್ಕಾರದ ಆದಾಯ ಮತ್ತು ವೆಚ್ಚಗಳ ಬಗ್ಗೆ ದೆಹಲಿ ಸರ್ಕಾರ ಪರಿಶೀಲನೆ ಮಾಡಿದೆ. ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ನೀಡಲು 3500 ಕೋಟಿ ಅಗತ್ಯವಿದೆ. ಕಳೆದ ಎರಡು ತಿಂಗಳಿನಿಂದ ಜಿಎಸ್‌ಟಿ ಸಂಗ್ರಹ 500 ಕೋಟಿ ಸೇರಿದಂತೆ ಇನ್ನಿತರ ಆದಾಯ ಒಟ್ಟುಗೂಡಿ 1735 ಕೋಟಿ ಹೊಂದಿದೆ'' ಎಂದು ಕೇಂದ್ರಕ್ಕೆ ತಿಳಿಸಿದ್ದಾರೆ.

ದೆಹಲಿಗೆ 7000 ಕೋಟಿ ಬೇಕಾಗಿದೆ

ದೆಹಲಿಗೆ 7000 ಕೋಟಿ ಬೇಕಾಗಿದೆ

''ಎರಡು ತಿಂಗಳಿಗೆ ನಮಗೆ 7000 ಕೋಟಿ ಬೇಕಾಗಿದೆ. ಇದರಲ್ಲಿ ದೆಹಲಿ ಸರ್ಕಾರದ ಸಿಬ್ಬಂದಿಗಳಿಗೆ ವೇತನ ನೀಡಬೇಕಾಗಿದೆ'' ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ. ದೆಹಲಿ ಸರ್ಕಾರದ ಉದ್ಯೋಗಿಗಳಿಗೆ ಹಾಗೂ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗೆ ವೇತನ ನೀಡಲು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಮ್ ಅದ್ಮಿ ಪಕ್ಷ ಕೋರಿದೆ ಎಂದು ತಿಳಿಸಿದೆ.

ಕೊರೊನಾ ವೈರಸ್ ಹರಡಲು 'ನಮಸ್ತೆ ಟ್ರಂಪ್' ಕಾರಣ: ಶಿವಸೇನಾ ಆರೋಪಕೊರೊನಾ ವೈರಸ್ ಹರಡಲು 'ನಮಸ್ತೆ ಟ್ರಂಪ್' ಕಾರಣ: ಶಿವಸೇನಾ ಆರೋಪ

ರಾಜ್ಯದಲ್ಲಿ ತೆರಿಗೆ ಸಂಗ್ರಹ ಕುಸಿದಿದೆ

ರಾಜ್ಯದಲ್ಲಿ ತೆರಿಗೆ ಸಂಗ್ರಹ ಕುಸಿದಿದೆ

''ಕೊರೊನಾ ವೈರಸ್ ಹಾಗೂ ಲಾಕ್‌ಡೌನ್‌ ಕಾರಣದಿಂದಾಗಿ ದೆಹಲಿ ಸರ್ಕಾರದ ತೆರಿಗೆ ಸಂಗ್ರಹವೂ ಶೇಕಡಾ 85ರಷ್ಟು ಕಡಿಮೆಯಾಗಿದೆ. ಕೇಂದ್ರವು ಉಳಿದ ರಾಜ್ಯಗಳಿಗೆ ಬಿಡುಗಡೆ ಮಾಡಿದ ವಿಪತ್ತು ಪರಿಹಾರ ನಿಧಿಯಿಂದ ದೆಹಲಿಗೆ ಯಾವುದೇ ಹಣ ಬಂದಿಲ್ಲ'' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ದೆಹಲಿಯಲ್ಲಿ ಹೆಚ್ಚು ಸೋಂಕು ವರದಿ

ದೆಹಲಿಯಲ್ಲಿ ಹೆಚ್ಚು ಸೋಂಕು ವರದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ 1163 ಜನರಿಗೆ ಹೊಸದಾಗಿ ಕೊವಿಡ್ ಸೋಂಕು ತಗುಲಿದೆ. ದೆಹಲಿಯಲ್ಲು ಒಟ್ಟು ಸೋಂಕಿತರ ಸಂಖ್ಯೆ ಈಗ 18549ಕ್ಕೆ ಏರಿಕೆಯಾಗಿದೆ. ಇದುವರೆಗೂ 416 ಜನರು ಮೃತಪಟ್ಟಿದ್ದಾರೆ.

English summary
Delhi is facing financial issues, so i have requested central govt to grant us Rs 5000 Crore: Delhi Deputy CM Manish Sisodia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X