ದೆಹಲಿ ಚುನಾವಣೆ: ಚಾಣಕ್ಯ ವರದಿಯಲ್ಲಿ ಯಾರಿಗೆ ಬಹುಮತ?
ನವದೆಹಲಿ, ಫೆ.6: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾರು ಯಾರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂಬುದು ಸದ್ಯದ ಚರ್ಚಾ ವಿಷಯವಾಗಿದೆ.
ಶುಕ್ರವಾರ ಮನೆ ಮನೆ ಪ್ರಚಾರ ಮುಗಿದಿದ್ದು ಶನಿವಾರದ ಮತದಾನಕ್ಕೆ ಮತದಾರರು ಸಿದ್ದವಾಗಿದ್ದಾರೆ. ಈ ನಡುವೆ ಬಹು ನಂಬುಗೆಯ ಸಮೀಕ್ಷಾ ಸಂಸ್ಥೆ ಚಾಣಕ್ಯ ತನ್ನ ವರದಿಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಘೋಷಿಸಿದೆ. [ನಾಲ್ಕು ಸಮೀಕ್ಷೆಗಳಲ್ಲೂ ಎಎಪಿ ಮುಂದೆ]
ಫೆ.7ರಂದು 70ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಫೆ.10ರಂದು ಫಲಿತಾಂಶ ಹೊರಬೀಳಲಿದೆ. ಇಲ್ಲಿ ತನಕ ಪ್ರಕಟವಾಗಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿ ಹಾಗೂ ಎಎಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿದೆ. [ಗುಪ್ತಚರ ಇಲಾಖೆ ಸ್ಫೋಟಕ ವರದಿ]

ಆದರೆ, ಕರಾರುವಾಕ್ ಸಮೀಕ್ಷೆ ನೀಡುವಲ್ಲಿ ಹೆಸರುವಾಸಿಯಾಗಿರುವ ಚಾಣಕ್ಷ ಸಂಸ್ಥೆ ತನ್ನ ವರದಿಯಲ್ಲಿ ಬಿಜೆಪಿ 41 ಸ್ಥಾನ ಗೆದ್ದು ಬಹುಮತ ಸಾಧಿಸಲಿದೆ ಎಂದಿದೆ. ಆಮ್ ಆದ್ಮಿ ಪಕ್ಷಕ್ಕೆ 24 ಹಾಗೂ ಕಾಂಗ್ರೆಸ್ಸಿಗೆ 5 ಸ್ಥಾನ ಸಿಗಲಿದೆಯಂತೆ. [ದೆಹಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ]
ಸಿಎಂ ಸ್ಥಾನ: ಸಿಎಂ ಸ್ಥಾನಕ್ಕಾಗಿ ನಡೆಸಲಾದ ಎಲ್ಲಾ ಸಮೀಕ್ಷೆಗಳಂತೆ ಅರವಿಂದ್ ಕೇಜ್ರಿವಾಲ್ ಅವರು ಕಿರಣ್ ಬೇಡಿ ಅವರಿಗಿಂತ ಮುಂದಿದ್ದಾರೆ. ಇಲ್ಲಿ ತನಕ ಬಂದಿರುವ ಪ್ರಮುಖ ಸಮೀಕ್ಷಾಗಳ ವಿವರ ಈ ಕೋಷ್ಟಕದಲ್ಲಿದೆ.
| ಇಂಡಿಯಾ ಟಿವಿ- ಸಿ ವೋಟರ್ | ದಿ ವೀಕ್- ಐಎಂಬಿಆರ್ | ಐಬಿಎನ್ 7- ಡೇಟಾ ಮಿನರಲ್ | ಜೀ ತಾಲೀಮ್ | ನ್ಯೂಸ್ ನೇಷನ್ | ಎಬಿಪಿ-ನೀಲ್ಸನ್ | ಎಚ್ ಟಿ- ಸಿ ಫೋರ್ | ಆಜ್ ತಕ್ - ಸಿಸೆರೋ | |
| ಬಿಜೆಪಿ | 37 | 36 | 36 | 32-36 | 31-35 | 29 | 27-32 | 19-25 |
| ಎಎಪಿ | 28 | 29 | 27 | 30-34 | 30-34 | 35 | 36-41 | 38-46 |
| ಕಾಂಗ್ರೆಸ್ | 5 | 4 | 7 | 4 | 3-5 | 6 | 2-7 | 0-2 |












Click it and Unblock the Notifications