ದೆಹಲಿ: ನಾಲ್ಕು ಸಮೀಕ್ಷೆಗಳಲ್ಲೂ ಎಎಪಿ ಮುಂದೆ
ನವದೆಹಲಿ, ಫೆ,3: ದೆಹಲಿ ಅಸೆಂಬ್ಲಿ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹೊರಬಿದ್ದಿರುವ ಹೊಸ ಸಮೀಕ್ಷೆಯಂತೆ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಮುಂಪಡೆ ಪಡೆದುಕೊಂಡಿದ್ದರೆ ಬಿಜೆಪಿ ಹಿಂದೆ ಬಿದ್ದಿದೆ. ಬುಕ್ಕಿಗಳು ಹಾಗೂ ಇಲ್ಲಿ ತನಕದ ಸಮೀಕ್ಷೆಗಳು ಬಿಜೆಪಿ ಪರವೇ ಇತ್ತು. ಆದರೆ, ಎಬಿಸಿ ನ್ಯೂಸ್ ಕೊಟ್ಟಿರುವ ಸಮೀಕ್ಷೆ ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸರಳ ಬಹುಮತದ ಮೂಲಕ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಖಾಸಗಿ ಸಮೀಕ್ಷೆ ವರದಿ ಮಾಡಿದೆ. ಎಎಪಿ 35 ಮತಗಳಿಸಲಿದ್ದು ಬಹುಮತ ಸಾಬೀತು ಪಡಿಸಲು ಇನ್ನೊಂದು ಸ್ಥಾನ ಸಾಕಾಗಿದೆ. ಬಿಜೆಪಿ 29 ಸ್ಥಾನಕ್ಕೆ ತೃಪ್ತಿ ಹೊಂದಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ 6 ಸ್ಥಾನ ಗಳಿಸಿದರೆ ಹೆಚ್ಚು ಎಂದು ಎಬಿಪಿ ನೀಲ್ಸನ್ ಸಮೀಕ್ಷೆ ಹೇಳಿದೆ. [ಬಿಜೆಪಿ ದೂರದೃಷ್ಟಿಯಲ್ಲಿ 270 ಅಂಶ]
ಮುಖ್ಯಮಂತ್ರಿ ಸ್ಥಾನ: ಕೇವಲ 49 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿಯೂ ಕೂಡಾ ಸಿಎಂ ಆಗಲಿ ಎಂದು ಸಮೀಕ್ಷೆಗೆ ಮತ ಹಾಕಿದ ಜನತೆ ಬಯಸಿದ್ದಾರೆ. [ಅಸೆಂಬ್ಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ]
ದೆಹಲಿ ಸಿಎಂ ಯಾರಾಗಬೇಕು ಎಂಬ ಸಮೀಕ್ಷೆ ಫಲಿತಾಂಶದಂತೆ ಅರವಿಂದ ಕೇಜ್ರಿವಾಲ್ ಅವರಿಗೆ ಶೇ 48ರಷ್ಟು ಮತಗಳು ಬಂದಿವೆ. ಕಿರಣ್ ಬೇಡಿ ಅವರಿಗೆ 42% ಮತ ಸಿಕ್ಕಿದೆ. [ದೆಹಲಿಯಲ್ಲಿ ಆಪ್ ಧೂಳಿಪಟ : ಗುಪ್ತಚರ ಇಲಾಖೆ]
ಮತ ಹಂಚಿಕೆ ಪಾಲು: ಶೇಕಡಾವಾರು ಮತಗಳಿಕೆಯಲ್ಲೂ ಎಎಪಿ ಮುಂದಿದ್ದು ಶೇ 37ರಷ್ಟು ಮತ ಗಳಿಸಲಿದೆಯಂತೆ. ಬಿಜೆಪಿಗೆ 33% ಹಾಗೂ ಕಾಂಗ್ರೆಸ್ 18% ಸಿಗಲಿದೆ. ಜನವರಿ ಕೊನೆ ವಾರದಲ್ಲಿ ಎಬಿಪಿ ನೀಲ್ಸನ್ ನಡೆಸಿದ ಸಮೀಕ್ಷೆಯ ಫಲಿತಾಂಶ ಇದಾಗಿದೆ.

ಎನ್ ಡಿಟಿವಿ ಸಮೀಕ್ಷೆಯಲ್ಲೂ ಎಎಪಿ ಮುಂದೆ
ಎನ್ ಡಿಟಿವಿ ಬಿಡುಗಡೆ ಮಾಡಿರುವ ಇತ್ತೀಚಿನ ಸಮೀಕ್ಷೆಯಂತೆ ಎಎಪಿ 37 ಸೀಟುಗಳಿಸಿ ಬಹುಮತದೊಂದಿಗೆ ಅಧಿಕಾರ ಸ್ಥಾಪಿಸಲಿದೆಯಂತೆ. ಬಿಜೆಪಿ 29, ಕಾಂಗ್ರೆಸ್ 4 ಸ್ಥಾನಕ್ಕೆ ಕುಸಿಯಲಿದೆ.

ಖಾಸಗಿ ವಾಹಿನಿಗಳ ಸಮೀಕ್ಷೆ ಸಂಗ್ರಹ
ಎಎಪಿ 36ರಿಂದ 41, ಬಿಜೆಪಿ 27ರಿಂದ 32, ಕಾಂಗ್ರೆಸ್ 2 ರಿಂದ 7 ಹಾಗೂ ಇತರರಿಂದ ಯಾವುದೇ ಸ್ಥಾನ ಗಳಿಸುವ ಸಾಧ್ಯತೆಗಳಿಲ್ಲ.
ದೆಹಲಿಯಲ್ಲಿ ಎಎಪಿ 36ರಿಂದ 41 (ಶೇ.40ರಷ್ಟು ಮತ), ಬಿಜೆಪಿ 27 ರಿಂದ 32 (ಶೇ.37ರಷ್ಟು), ಕಾಂಗ್ರೆಸ್ 2 ರಿಂದ 7 (ಶೇ.15ರಷ್ಟು) ಹಾಗೂ ಇತರರು 0 ಗಳಿಸಿದರೂ (ಶೇ.5) ಮತ.
ಮುಖ್ಯಮಂತ್ರಿ ಅಭ್ಯರ್ಥಿ: ಕೇಜ್ರಿವಾಲ್ ಶೇ.46, ಕಿರಣ್ ಬೇಡಿ 37 ಹಾಗೂ ಅಜಯ್ ಮಕನ್ ಶೇ.9ರಷ್ಟು ಮತ ಪಡೆದಿದ್ದಾರೆ.
ಎಕಾನಾಮಿಕ್ಸ್ ಟೈಮ್ಸ್ ಟಿಎನ್ ಎಸ್ ಸಮೀಕ್ಷೆ
ಎಕಾನಾಮಿಕ್ಸ್ ಟೈಮ್ಸ್ ಗಾಗಿ ಟಿಎನ್ ಎಸ್ ನಡೆಸಿದ ಸಮೀಕ್ಷೆ ಪ್ರಕಾರ 70 ಸೀಟುಗಳ ಪೈಕಿ ಎಎಪಿ ಶೇ 49ರಷ್ಟು ಮತ ಪಾಲು ಜೊತೆಗೆ 36-40 ಸ್ಥಾನ, ಬಿಜೆಪಿ 28-32 ಸ್ಥಾನ ಪಡೆಯಲಿದೆ.
ಸಿಎಂ ಸ್ಥಾನ ಕೇಜ್ರಿವಾಲ್ ಪರ ಶೇ 54ರಷ್ಟು ಮತ ಬಿದ್ದಿದ್ದರೆ, ಕಿರಣ್ ಬೇಡಿ ಪರ 38% ಹಾಗೂ ಅಜಯ್ ಮಾಕೇನ್ ಪರ ಶೇ 6 ರಷ್ಟು ಮತ ಬಿದ್ದಿದೆ.

ಹಿಂದೂಸ್ತಾನ್ ಟೈಮ್ಸ್ ಸಿ ಫೋರ್ ನೀಡಿರುವ ಸಮೀಕ್ಷೆ
ಹಿಂದೂಸ್ತಾನ್ ಟೈಮ್ಸ್ ಸಿ ಫೋರ್ ನೀಡಿರುವ ಸಮೀಕ್ಷೆ ವರದಿ ಪ್ರಕಾರ ಕೇಜ್ರಿವಾಲ್ ಅವರ ಎಎಪಿ 36 ರಿಂದ 41 ಸ್ಥಾನ ಪಡೆಯಲಿದೆ. ಬಿಜೆಪಿ 27 ರಿಂದ 32 ಸ್ಥಾನ ಗಳಿಸಿದೆ. ಕಾಂಗ್ರೆಸ್ 2 ರಿಂದ 7 ಸೀಟು ಗಳಿಸಿದರೆ ಹೆಚ್ಚು. ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ಅರ್ಹ ಎಂದು ಶೇ 48ರಷ್ಟು ಮಂದಿ ಮತ ಹಾಕಿದ್ದಾರೆ.












Click it and Unblock the Notifications