ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಅಸೆಂಬ್ಲಿ ಚುನಾವಣೆ 2015: ಅಂಕಿ ಅಂಶ ಪಕ್ಷಿನೋಟ

By Mahesh
|
Google Oneindia Kannada News

ನವದೆಹಲಿ, ಜ.19: ದೆಹಲಿ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ವಿಎಸ್ ಸಂಪತ್ ಅವರು ಜ.12 ರಂದು ಪ್ರಕಟಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಅಂದಿನಿಂದಳೇ ಜಾರಿಗೊಂಡಿದೆ. 70 ಅಸೆಂಬ್ಲಿ ಸೀಟುಗಳಿಗೆ ಫೆ.7ರಂದು ಮತದಾನ ನಡೆಯಲಿದೆ. ಫೆ.1೦ರಂದು ಫಲಿತಾಂಶ ಹೊರಬೀಳಲಿದೆ.

ಈಗಾಗಲೇ ಪ್ರಮುಖ ಪಕ್ಷಗಳಾದ ಬಿಜೆಪಿ, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ತನ್ನ ರಣತಂತ್ರವನ್ನು ರೂಪಿಸುತ್ತಿದ್ದು, ಮತದಾರರ ಚಿತ್ತ ಎತ್ತ ನೆಟ್ಟಿದೆ ಎಂಬುದನ್ನು ಅರಿಯಲು ಮಾಧ್ಯಮಗಳು ಸಾಹಸಪಡುತ್ತಿವೆ. ತರಾವರಿ ಅಂಕಿ ಅಂಶಗಳೊಂದಿಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರ ಬರುತ್ತಿವೆ. ಸದ್ಯಕ್ಕೆ ದೆಹಲಿ ಅಸೆಂಬ್ಲಿ ಚುನಾವಣೆ 2015 ಪ್ರಮುಖ ಅಂಶಗಳು ಇಲ್ಲಿವೆ ನೋಡಿ..[ಅಸೆಂಬ್ಲಿ ಚುನಾವಣಾ ವೇಳಾಪಟ್ಟಿ ]

* ನಾಮಪತ್ರ ಸಲ್ಲಿಕೆ ಅರಂಭ: 14/01/2015

* ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ: 21/01/2015

* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : 24/01/2015

* ಮತದಾನ: 07/02/2015

* ಮತ ಎಣಿಕೆ: 10/02/2015

* ಒಟ್ಟು ಮತ ಕ್ಷೇತ್ರ: 70 (58 ಸಾಮಾನ್ಯ,12 ಪರಿಶಿಷ್ಟ ಜಾತಿ)

* ಮತ ಕೇಂದ್ರ, ಮತಗಟ್ಟೆ: 2,527 ಮತಕೇಂದ್ರಗಳಿದ್ದು 11,763ಕ್ಕೂ ಅಧಿಕ ಮತಗಟ್ಟೆಗಳಿವೆ.

* ಅತಿ ವಿಸ್ತೃತ ಮತ ಕ್ಷೇತ್ರ: ನರೇಲಾ ಕ್ಷೇತ್ರ (143.42 ಚದರ ಕಿ.ಮೀ)

* ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯೆ : 36

Delhi Assembly polls 2015: Facts at a glance

* ಮತದಾರರ ಸಂಖ್ಯೆ: 1.30 ಕೋಟಿ ಜನ

* ಹೊಸ ಮತದಾರರು: 1.6 ಲಕ್ಷ

* ಮೊದಲ ಬಾರಿ ಮತಹಾಕುವವರು: 1.72 ಲಕ್ಷ

* ಪುರುಷ ಮತದಾರರು: 72.60 ಲಕ್ಷ

* ಮಹಿಳಾ ಮತದಾರರು: 58.24 ಲಕ್ಷ

* 18 ರಿಂದ 19 ರ ವಯೋಮಿತಿಯುಳ್ಳವರು: 40,132

ಪಕ್ಷದ ಸಂಭಾವ್ಯ ಸಿಎಂ ಅಭ್ಯರ್ಥಿಗಳು
* ಎಎಪಿ: ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ.
* ಕಾಂಗ್ರೆಸ್: ಮಾಜಿ ಕೇಂದ್ರ ಸಚಿವ ಅಜಯ್ ಮಾಕೇನ್
* ಬಿಜೆಪಿ: ಇನ್ನೂ ಯಾರನ್ನು ಹೆಸರಿಸಿಲ್ಲ

2013ರ ಫಲಿತಾಂಶ
* ಬಿಜೆಪಿ 31 ಸ್ಥಾನ (ಶೇ 33.1ರಷ್ಟು ಮತ ಪಾಲು)
* ಕಾಂಗ್ರೆಸ್ 8 ಸ್ಥಾನ ( ಶೇ24.6ರಷ್ಟು ಮತ ಪಾಲು)
* ಆಮ್ ಆದ್ಮಿ ಪಕ್ಷ 28 ಸ್ಥಾನ ( ಶೇ 29.5 ಮತ ಪಾಲು)

ಈ ಹಿಂದಿನ ಸರ್ಕಾರಗಳು

* ಡಿಸೆಂಬರ್ 2, 1993ರಿಂದ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಐದು ವರ್ಷಗಳ ಕಾಲ ನಡೆಯಿತು.
* ಮದನ್ ಲಾಲ್ ಖುರಾನಾ, ಸಾಹಿಬ್ ಸಿಂಗ್ ವರ್ಮ, ಸುಷ್ಮಾ ಸ್ವರಾಜ್ ಮುಖ್ಯಮಂತ್ರಿಗಳಾಗಿದ್ದರು.
* ಡಿ.3, 1998ರಿಂದ ಡಿ.28, 2013(15 ವರ್ಷ, 25 ದಿನ)ಕಾಂಗ್ರೆಸ್ ಆಡಳಿತವಿತ್ತು.
* 15 ವರ್ಷಗಳ ಕಾಲ ಶೀಲಾ ದೀಕ್ಷಿತ್ ಅವರು ಕಾಂಗ್ರೆಸ್ ಸರ್ಕಾರ ಮುನ್ನಡೆಸಿದರು.
* ಡಿ.28, 2013 ರಿಂದ ಫೆ.15, 2014(49 ದಿನಗಳು) ಆಮ್ ಆದ್ಮಿ ಪಕ್ಷ ಅಧಿಕಾರ ವಹಿಸಿಕೊಂಡಿತು.
* ಆರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿಯಾಗಿ 49 ದಿನಗಳ ಕಾಲ ಆಡಳಿತ ನಡೆಸಿದ್ದರು.

English summary
The Election Commission announced that the single-phase Delhi assembly polls 2015 will take place on Feb 7, Saturday. "The Model Code of Conduct has come into effect immediately", the Chief Election Commissioner V S Sampath said in a press conference held at the Nirvachan Sadan in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X