2013ರಲ್ಲಿ ಚುನಾವಣೆಗೆ ಅಡ್ಡಿಪಡಿಸಿದ ಶಾಸಕನಿಗೆ 3 ತಿಂಗಳು ಶಿಕ್ಷೆ

ನವದೆಹಲಿ, ಜೂನ್ 25: ದೆಹಲಿಯ 2013ರ ವಿಧಾನಸಭೆ ಚನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 2019ರಲ್ಲಿ ಶಾಸಕರೊಬ್ಬರಿಗೆ 3 ತಿಂಗಳು ಜೈಲುಶಿಕ್ಷೆ ವಿಧಿಸಲಾಗಿದೆ.

ಆಮ್​ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್​ಅವರು ಮತದಾನದ ಕೇಂದ್ರದೊಳಗೆ ನುಗ್ಗಿ ಮತದಾನ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡಿದ್ದರು. ಈ ಘಟನೆ ಕುರಿತಂತೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ತ್ವರಿತ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್​ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಇಂದು ಶಾಸಕ ಮನೋಜ್ ಅವರಿಗೆ 3 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಆದರೆ, ಕೋರ್ಟ್ ಆದೇಶವನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸುವ ಅವಕಾಶ ಇರುತ್ತದೆ.

2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ದೆಹಲಿಯ ಕಲ್ಯಾಣ್​ಪುರಿ ಪ್ರದೇಶದ ಎಂಸಿಡಿ ಮತಗಟ್ಟೆಗೆ ಮುಂದೆ ಮನೋಜ್ ಕುಮಾರ್ ಅವರು 50ಕ್ಕೂ ಅಧಿಕ ಮಂದಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಮತದಾನ ಪ್ರಕ್ರಿಯೆಗೆ ಅಡ್ದಿಪಡಿಸಿ, ಮತಕೇಂದ್ರದೊಳಗೆ ನುಗ್ಗಲು ಯತ್ನಿಸಿದ್ದರು.

Delhi court sentences AAP MLA to 3 months in jail for obstructing polling process

ಎಎಪಿ ಅಭ್ಯರ್ಥಿಯಾಗಿದ್ದರೂ ಪ್ರತಿಭಟನೆ ನಡೆಸಿ, ಮತದಾನಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಎಂಸಿಡಿ ಶಾಲೆ ಮತಗಟ್ಟೆ ಅಧಿಕಾರಿಗಳು, ಮನೋಜ್​ ಕುಮಾರ್ ವಿರುದ್ಧ ದೂರು ದಾಖಲಿಸಿದ್ದರು.

ಭಾರತೀಯ ದಂಡ ಸಂಹಿತೆ 186ರ ಪ್ರಕಾರ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಜನಪ್ರತಿನಿಧಿಗಳ ಕಾಯ್ದೆಯ ವಿಧಿ 131ರ ಪ್ರಕಾರ ಮತಗಟ್ಟೆಯ ಬಳಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಮನೋಜ್​ ಕುಮಾರ್​ಅವರನ್ನು ದೋಷಿ ಎಂದು ಜೂನ್ 11ರಂದು ಘೋಷಿಸಲಾಗಿತ್ತು, ಜೂನ್ 25ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ.

ಐಪಿಸಿ ಸೆಕ್ಷನ್ 186, ಜನಪ್ರತಿನಿಧಿಗಳ ಕಾಯ್ದೆಯ ವಿಧಿ 131ರ ಉಲ್ಲಂಘನೆ ಆರೋಪ ಹೊತ್ತುಕೊಂಡಿರುವ ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮನೋಜ್​ ಕುಮಾರ್​ಅವರಿಗೆ ಸದ್ಯ ಜನಪ್ರತಿನಿಧಿಗಳ ತ್ವರಿತ ನ್ಯಾಯಾಲಯ ಜಾಮೀನು ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+